HomePage_Banner_
HomePage_Banner_

ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು – ಯೋಗಾಸನ ಶಿಬಿರ

yoga day - prasanna copy

ಉಜಿರೆ : ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು ಲಾಲ, ಬೆಳ್ತಂಗಡಿ ಇಲ್ಲಿನ ಆರ್ಯುವೇದ ವಿದ್ಯಾರ್ಥಿಗಳಿಗೆ, ಯೋಗಸಂದೇಶ ಧ್ಯಾನ ಕೇಂದ್ರ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಉಚಿತ ಯೋಗಾಸನ ಶಿಬಿರದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಶಿಬಿರವು ಜೂ.೯ ರಂದು ಪ್ರಾರಂಭಗೊಂಡು ಜೂ.೨೧ ರವರೆಗೆ ನಡೆಯಲಿದೆ. ಯೋಗಸಂದೇಶ ಧ್ಯಾನ ಕೇಂದ್ರ ಬೆಳ್ತಂಗಡಿ ಇಲ್ಲಿಯ ಯೋಗ ಗುರುಗಳಾದ ಮಹೇಶ ಎ ಪತ್ತರ್ ಇವರು ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಪ್ರಸನ್ನ ಇವರು ವಹಿಸಿ, ಯೋಗವು ವರ್ಷದಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿರದೆ ಅದು ನಮ್ಮ ದೈನಂದಿನ ಜೀವನದ ಭಾಗವಾಗಿರಬೇಕು, ನಮ್ಮ ದೇಶದ ಸಂಸ್ಕೃತಿಯ ಪ್ರತೀತವಾಗಿರುವ ಯೋಗವು ಇಂದು ಪ್ರಪಂಚದಾದ್ಯಂತ ಅತೀ ವೇಗವಾಗಿ ಪಸರಿಸುತ್ತಿರುವುದನ್ನು ನೋಡಿದರೆ ಅದರ ಮಹತ್ವವೇನೆಂದು ತಿಳಿಯುತ್ತದೆ. ಯೋಗವು ದೇಹದ ಮತ್ತು ಮನಸ್ಸಿನ ವಿಕಸನವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ ಎಂದು ಯೋಗಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಧ್ಯಾನಕೇಂದ್ರದ ಸಂಯೋಜಕ ರಾಜಗೋಪಾಲ್ ಭಟ್, ಪ್ರಸನ್ನ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಮತ್ತು ಪುಂಜಾಲಕಟ್ಟೆ ಸರಕಾರಿ ಶಾಲೆಯ ಅಧ್ಯಾಪಕ ಕೆ. ದರಣೇಂದ್ರ ಕುಮಾರ್ ಜೈನ್ ಇವರು ಉಪಸ್ಥಿತರಿದ್ದು ಯೋಗಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಉಪನ್ಯಾಸಕ ಪ್ರಶಾಂತ್ ಮತ್ತು ಗುಣಕರ್ ಇವರು ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.