HomePage_Banner_
HomePage_Banner_
HomePage_Banner_

ಸರಕಾರದಿಂದ ಮಂಜೂರಾದ ಜಾಗಕ್ಕಾಗಿ ನಿವೃತ್ತ ಸೈನಿಕರ ಅಲೆದಾಟ ಕಂದಾಯ ಇಲಾಖೆ ನಿರುತ್ತರ-ತಾ.ಪಂ. ಸದಸ್ಯರ ಪ್ರತಿಭಟನೆ

BJP Prathibhatane copy

Thaluku panchayath sabhe copyಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಹಣ ನೀಡದೇ ಯಾವುದೇ ಕೆಲಸಗಳು ಆಗುತ್ತಿಲ್ಲ, ಭ್ರಷ್ಟಾಚಾರ ಮಿತಿ ಮೀರಿದೆ, ನಿವೃತ್ತ ಯೋಧರಿಬ್ಬರಿಗೆ ಜಾಗ ಮಂಜೂರಾಗಿ ವರ್ಷಗಳೇ ಕಳೆದಿದ್ದರೂ ಅವರಿಗೆ ಜಾಗ ನೀಡುವ ಕೆಲಸ ಮಾಡದೆ ಅವರನ್ನು ಕಡತಗಳನ್ನು ಕಚೇರಿಯಿಂದ ಕಚೇರಿಗೆ ಕಳುಹಿಸುತ್ತಾ ಉದ್ದೇಶ ಪೂರ್ವಕವಾಗಿ ದೇಶ ಸೇವೆ ಮಾಡಿದ ಸೇನಾನಿಗಳನ್ನು ಅಲೆದಾಡಿಸಲಾಗುತ್ತಿದೆ ಈ ಬಗ್ಗೆ ಕಂದಾಯ ಇಲಾಖೆಯಿಂದ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ತಾ.ಪಂ. ಸಭೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಘಟನೆ ಎ.28ರಂದು ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷತೆ ದಿವ್ಯಾಜ್ಯೋತಿ ವಹಿಸಿದ್ದರು. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ತಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತಾ.ಪಂ.ದಿಂದ ಉಪಾಧ್ಯಕ್ಷರ ನಿರ್ಲಕ್ಷ:
ತಾ.ಪಂ.ದಲ್ಲಿ ಉಪಾಧ್ಯಕ್ಷರನ್ನು ನಿರ್ಲಕ್ಷಿಸಲಾಗುತ್ತಿದೆ. ಅವರಿಗೆ ಕಾರ್ಯಕ್ರಮಕ್ಕೆ ಹೋಗಲು ವಾಹನದ ವ್ಯವಸ್ಥೆಗಳಿಲ್ಲ, ತಾ.ಪಂ.ದ ವಾಹನದ ಚಾಲಕ ಉಪಾಧ್ಯಕ್ಷರು ಪೋನ್ ಮಾಡಿದಾಗ ಅದನ್ನು ಸ್ವೀಕರಿಸದೇ ಕಟ್ ಮಾಡುತ್ತಿದ್ದಾರೆ ಎಂದು ಸದಸ್ಯರಾದ ಕೊರಗಪ್ಪ ಗೌಡ, ಜೋಯಲ್ ಮೆಂಡೋನ್ಸಾ, ಧನಲಕ್ಷ್ಮೀ, ಲಕ್ಷ್ಮೀನಾರಾಯಣ, ಶಶಿಧರ ಕಲ್ಮಂಜ ಮೊದಲಾದವರು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷೆ ವೇದಾವತಿಯವರು ನನಗೆ ಒಂದು ವರ್ಷದಲ್ಲಿ ಎರಡು ಬಾರಿ ಮಾತ್ರ ವಾಹನದ ವ್ಯವಸ್ಥೆ ಮಾಡಿದ್ದಾರೆ, ಇತರ ದಿನಗಳಲ್ಲಿ ಅಗತ್ಯ ಕಾರ್ಯಕ್ರಮಗಳಿಗೆ ಹೋಗಲು ಸಮಸ್ಯೆಯಾಗುತ್ತಿದೆ ಎಂದು ವಿವರಿಸಿದರು. ತಿಂಗಳಲ್ಲಿ ಅಧ್ಯಕ್ಷರ ಕೋಟಕ್ಕೆ 150 ಲೀಟರ್, ಉಪಾಧ್ಯಕ್ಷರ ಕೋಟಕ್ಕೆ 50 ಲೀಟರ್ ಡಿಸೇಲ್ ಬರುತ್ತದೆ ಇದನ್ನು ಯಾರು ಉಪಯೋಗಿಸುತ್ತಿದ್ದಾರೆ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಈ ಸಂದರ್ಭ ಮಾತನಾಡಿದ ಇ.ಒ. ನರೇಂದ್ರರವರು ಉಪಾಧ್ಯಕ್ಷರಿಗೆ ವಾಹನದ ವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೆ ಬಂದಾಗ ಮಾಡಿ ಕೊಟ್ಟಿದ್ದೇನೆ. ಅಧ್ಯಕ್ಷ-ಉಪಾಧ್ಯಕ್ಷರು ಡಿಸೇಲ್ ಉಪಯೋಗಿಸಿದ ಬಗ್ಗೆ ತಾ.ಪಂ.ದಲ್ಲಿ ಲಾಗ್‌ಬುಕ್ ಇದ್ದು ಇದನ್ನು ಪರಿಶೀಲಿಸಬಹುದು ಎಂದು ತಿಳಿಸಿ, ಇನ್ನು ಮುಂದೆ ವಾಹನದ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು.
ಜಾಗಕ್ಕಾಗಿ ಮಾಜಿ ಸೈನಿಕರ ಅಲೆದಾಟ :
ಪಾರೆಂಕಿ ಗ್ರಾಮದ ಮಾಜಿ ಸೈನಿಕ ನೆಲ್ಸನ್ ಲಸ್ರಾದೋ ಅವರಿಗೆ 1 ಎಕ್ರೆ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲಾಗಿದ್ದರೂ
ಅದು ಮಂಜೂರಾಗದಿರಲು ಕಾರಣವೇನು? ಕಡತಗಳು ಎಲ್ಲಿದೆ ಎಂದು ಜೊಯೆಲ್‌ಪ್ರಶ್ನಿಸಿದರು. ಈ ಬಗ್ಗೆ ಕಂದಾಯ ಇಲಾಖೆಯ ಡಿ.ಟಿ. ಗೋವಿಂದ ನಾಯ್ಕ ಉತ್ತರಿಸಿ, ನೆಲ್ಸನ್‌ರವರಿಗೆ ಭೂ ಮಂಜೂರಾತಿಗೆ ಪ್ರಸ್ತಾವನೆಯನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪಾರೆಂಕಿ ಗ್ರಾಮದ ಮಾಜಿ ಸೈನಿಕ ವಿಕ್ಟರ್ ರೊಡ್ರಿಗಸ್ ಎಂಬವರಿಗೆ 2005ರಲ್ಲಿ ಸ.ನಂ. 131/3ರಲ್ಲಿ 1 ಎಕ್ರೆ ಭೂ ಮಂಜೂರಾತಿ ಆಗಿ ವರ್ಷಗಳು ಕಳೆದಿದ್ದರೂ ಇನ್ನೂ ಅವರಿಗೆ ಜಮೀನು ಸಿಕ್ಕಿಲ್ಲ, ಮಾಜಿ ಸೈನಿಕರು ದಿನಂಪ್ರತಿ ಎ.ಸಿ. ಕಚೇರಿ, ಡಿ.ಸಿ. ಕಚೇರಿಗೆ ಅಲೆಯುತ್ತಿದ್ದಾರೆ. ಇಲಾಖೆಯಲ್ಲಿ ಕೇಳಿದರೆ ಸ್ವಷವಾದ ಉತ್ತರ ದೊರೆಯುತ್ತಿಲ್ಲ, ಇವರನ್ನು ಅಧಿಕಾರಿಗಳು ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ಜೊಯೆಲ್ ಆರೋಪಿಸಿದರು.
ಆದರೆ ಈ ಅರ್ಜಿಯ ಬಗ್ಗೆ ಗೋವಿಂದ ನಾಯ್ಕರಲ್ಲಿ ಮಾಹಿತಿ ಇರಲಿಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಿ ಸಭೆಗೆ ಮಾಹಿತಿ ನೀಡುವುದಾಗಿ ಗೋವಿಂದ ನಾಯ್ಕ ಅವರು ಸಭೆಗೆ ತಿಳಿಸಿದರೂ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಸಾಮಾನ್ಯ ಸಭೆಗೆ ತಹಶೀಲ್ದಾರ್ ಅವರು ಗೈರು ಹಾಜರಾಗಿರುವ ಬಗ್ಗೆ ಹಾಗೂ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಸದಸ್ಯರಾದ ಶಶಿಧರ ಕಲ್ಮಂಜ, ಲಕ್ಷ್ಮೀನಾರಾಯಣ ಹಾಗೂ ಇತರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸಭೆಯಲ್ಲಿ ಶಾಸಕರು ಹೇಳಿದ ಮಾತಿಗೂ ಅಧಿಕಾರಿಗಳು ಗೌರವ ಕೊಡುವುದಿಲ್ಲ, ಕಂದಾಯ ಇಲಾಖೆಯಿಂದ ಸರಿಯಾದ ಮಾಹಿತಿ ಬರುವವರೆಗೆ ಸಭೆ ನಡೆಸುವುದು ಬೇಡ, ಸಭೆ ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಕಂದಾಯ ಇಲಾಖೆಯಿಂದ ಈ ಹಿಂದೆ ನಿವೃತ್ತ ಸೈನಿಕರಿಗೆ ಭೂ ಮಂಜೂರಾತಿಯ ವಿವರದ ಪಟ್ಟಿಯನ್ನು ನೀಡಲಾಯಿತು. ಆದರೆ ಸಭೆಯಲ್ಲಿ ಪ್ರಸ್ತಾಪಿಸಲಾದ ಪಾರೆಂಕಿಯ ಇಬ್ಬರು ನಿವೃತ್ತ ಸೈನಿಕರ ಜಾಗ ಮಂಜೂರಾತಿ ಬಗ್ಗೆ ಯಾವುದೇ ಉತ್ತರ ದೊರೆಯದಿದ್ದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಸದಸ್ಯರಿಂದ ಧರಣಿ : ಸಭಾ ತ್ಯಾಗ ಮಾಡಿದ ತಾ.ಪಂ. ಸದಸ್ಯರು ಸಭಾಂಗಣದ ಎದುರು ಧರಣಿ ಪ್ರತಿಭಟಣಿ ನಡೆಸಿದರು. ನಿವೃತ್ತ ಸೈನಿಕರು ಸೇರಿದಂತೆ ಜನಸಾಮಾನ್ಯರನ್ನು ಕಾಡುತ್ತಿರುವ ತಾಲೂಕು ಕಚೇರಿ ಸರಿಯಾಗದ ಹೊರತು ಸಭೆ ನಡೆಸಿ ಯಾವುದೇ ಪ್ರಯೋಜನವಿಲ್ಲ ಎಂದು ಸದಸ್ಯರು ಅಭಿಪ್ರಾಯ ಪಟ್ಟರು. ಇದಕ್ಕೆ ಕಾಂಗ್ರೆಸ್‌ನ ಸದಸ್ಯ ಜಯರಾಮ ಸೇರಿದಂತೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದರು. ಅಂತಿಮವಾಗಿ ಕಂದಾಯ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಭೆಯನ್ನು ಮುಂದೂಡಲಾಯಿತು.
ತಾಲೂಕು ಕಚೇರಿಯಲ್ಲಿ ಪ್ರತಿಭಟನೆ : ತಾಲೂಕು ಕಚೇರಿಯಲ್ಲಿ ಜನ ಸಾಮಾನ್ಯರ ಕೆಲಸಗಳು ಆಗುತ್ತಿಲ್ಲ, ಪ್ರತಿಯೊಂದು ವಿಷಯಗಳಿಗೂ ಲಂಚ ನೀಡದೆ ಕೆಲಸಗಳು ಆಗುತ್ತಿಲ್ಲ. ನಿವೃತ್ತ ಸೈನಿಕರಿಗೆ ಸತಾಯಿಸಿದ ಇವರು ಜನಸಾಮಾನ್ಯರನ್ನು ಸತಾಯಿಸದೇ ಬಿಡುವುದಿಲ್ಲ. ಕಂದಾಯ ಇಲಾಖೆಯಿಂದ ಪೂರ್ಣ ಮಾಹಿತಿ ಬಂದು ಅರ್ಜಿ ಸಲ್ಲಿಸಿದ ಮಾಜಿ ಸೈನಿಕರಿಗೆ ಜಾಗ ಮಂಜೂರು ಆದ ಬಳಿಕ ಸಭೆ ನಡೆಸಲಿ, ಒಂದು ವೇಳೆ ಮಂಜೂರು ಮಾಡದಿದ್ದಲ್ಲಿ ತಾಲೂಕು ಕಚೇರಿಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಸದಸ್ಯರು ಎಚ್ಚರಿಸಿದರು. ಕಂದಾಯ ಇಲಾಖೆಯಿಂದ ಮಾಜಿ ಸೈನಿಕರ ಜಾಗದ ಬಗ್ಗೆ ಪೂರ್ಣ ಮಾಹಿತಿ ಬಂದು ಅವರಿಗೆ ಜಾಗ ಮಂಜೂರು ಆದ ಬಳಿಕ ಸಭೆ ನಡೆಸಲು ನಿರ್ಣಯಿಸಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.