HomePage_Banner_
HomePage_Banner_

೨೦೧೭ ೧೮ನೇ ವರ್ಷದ ಸಂಪೂರ್ಣ ಸುರಕ್ಷಾದ ಆರೋಗ್ಯ ವಿಮೆ ಲೋಕಾರ್ಪಣೆ

skdrdp sampurna suraksha lokarpane copy

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಸದಸ್ಯರು ಮತ್ತು ಅವರ ಮನೆಮಂದಿಯ ಆರೋಗ್ಯ ರಕ್ಷಣೆಯ ಸಲುವಾಗಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ೨೦೦೪ನೇ ವರ್ಷದಲ್ಲಿ ಆರಂಭಿಸಿದ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಕಾರ‍್ಯಕ್ರಮ ಇದೀಗ ೧೩ ವರ್ಷಗಳನ್ನು ಪೂರೈಸಿರುತ್ತದೆ. ಹಾಲೀ ವರ್ಷದಲ್ಲಿ ಈ ವಿಮಾ ಕಾರ್ಯಕ್ರಮದಡಿಯಲ್ಲಿ ೨.೫ಲಕ್ಷ ಸದಸ್ಯ ಕುಟುಂಬಗಳಿದ್ದು, ಈವರೆಗೆ ೭೦,೦೮೪ ಸದಸ್ಯರಿಗೆ ೩೮ ಕೋಟಿ ರೂಪಾಯಿಗಳ ಸೌಲಭ್ಯಗಳನ್ನು ನೀಡಲಾಗಿದೆ. ಹಾಗೂ ಸುಮಾರು ೮ ಕೋಟಿ ರೂಪಾಯಿಗಳ ಸೌಲಭ್ಯಗಳನ್ನು ನೀಡಲಿದೆ.
೨೦೧೭-೧೮ನೇ ವರ್ಷಕ್ಕೆ ಸುಮಾರು ೧೦ ಲಕ್ಷ ಜನ ಸದಸ್ಯರು ಈ ವಿಮಾ ಯೋಜನೆಯ ಪಾಲುದಾರರಾಗಿದ್ದು, ಇವರಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಸಲುವಾಗಿ ಸಾರ್ವಜನಿಕ ವಲಯದ ೪ ವಿಮಾ ಕಂಪನಿಗಳಿಗೆ ೪೦ ಕೋಟಿ ರೂಪಾಯಿ ಪ್ರೀಮಿಯಂ ಮೊತ್ತದ ಚೆಕ್‌ಗಳನ್ನು ಮಾ.೩೧ ರಂದು ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್ ಮಂಜುನಾಥ್, ಹಣಕಾಸು ನಿರ್ದೇಶಕ ಶಾಂತರಾಮ್ ಪೈ, ವಿಮಾ ಕಂಪನಿಯ ಹಿರಿಯ ಅಧಿಕಾರಿಗಳಾದ ಪಿ.ಸಿ ಹೋಟ, ಸುರೇಶ್ ಬಲರಾಂ, ಶ್ರೀಮತಿ ಶೋಭ ರಾಜಗಿರಿ, ಶ್ರೀಮತಿ ಪ್ರತಿಭಾ ಶೆಟ್ಟಿ, ಪುಂಡಲಿಕ ನಾಯಕ್, ವಿ.ಪಿ ನಾಯಕ್, ಶೇಷಪ್ಪ ನಾಯ್ಕ್ ಮತ್ತು ಸಂಪೂರ್ಣ ಸುರಕ್ಷಾ ನಿರ್ದೇಶಕ ಅಬ್ರಹಾಂ ಎಂ.ಕೆ, ಯೋಜನಾಧಿಕಾರಿಗಳಾದ ಶಿವಪ್ರಸಾದ್.ಕೆ ಹಾಗೂ ಪದ್ಮಯ್ಯ ಸಿ.ಹೆಚ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.