ಬಿಜೆಪಿ ಮಂಡಲದ ತ್ರೈಮಾಸಿಕ ಕಾರ್ಯಕಾರಿಣಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

  BJP mandala karyakarini copyಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರ ಭಾಷಣದ ಹೈಲೈಟ್ಸ್
*ಸಂಘಟನೆ, ರಾಜಕೀಯ, ವಿಮರ್ಷೆಗಾಗಿ ಸಭೆ.
*ಚಳವಳಿಯ ರೀತಿಯಲ್ಲಿ ಬಿಜೆಪಿ ಈ ಕಾರ್ಯ ಮಾಡುತ್ತಿದೆ.
*ಪಕ್ಷ ಆಂತರಿಕವಾಗಿ ಇಂದು ಬದಲಾಗಿದೆ.
*ಕೇಂದ್ರದಲ್ಲಿ ಭ್ರಷ್ಠಾಚಾರ ರಹಿತ ಆಡಳಿತ ಮೋದಿಯವರಿಂದ ನಡೆಯುತ್ತಿದೆ.
*ಕೇಂದ್ರದ ಆರ್ಥಿಕ ನೀತಿ, ಧೋರಣೆ, ಪರಿವರ್ತನೆಯಿಂದಾಗಿ ದೇಶದಲ್ಲಿ ಉತ್ತಮ ಆರ್ಥಿಕ ಸ್ಥಿರತೆ ಉಂಟಾಗಿದೆ.
*ಕರ್ನಾಟಕದಲ್ಲಿ 164 ತಾಲೂಕುಗಳಲ್ಲಿ ಬರದ ವಾತಾವರಣವಿದೆ.
*ಜಾನುವಾರುಗಳಿಗೆ ಮೇವು, ಜನತೆಗೆ ಉದ್ಯೋಗ ಮತ್ತು ಕುಡಿಯುವ ನೀರಿಗೂ ತತ್ವಾರ ಬಂದಿದೆ.
*ರಾಜ್ಯ ಸರಕಾರ ಚಿರನಿದ್ರೆಗೆ ಜಾರಿದೆ. ಸರಕಾರಕ್ಕೂ ಬರಗಾಲ ಬಂದಿದೆ. ಹಾಗಿರುವಂತೆ ಕೇಂದ್ರದತ್ತ ಬೆಟ್ಟು ಮಾಡುತ್ತಿದೆ.
*ಗೋವು ಕಳ್ಳತನ, ಶ್ರದ್ಧಾ ಕೇಂದ್ರದ ಮೇಲೆ ಪ್ರಹಾರ, ಮರಳು ಮಾಫಿಯಾದಲ್ಲಿ ಆಡಳಿತ ನಿರತವಾಗಿದೆ.
*ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ.
*ಸ್ವಾವಲಂಭಿ, ಸ್ವಾಭಿಮಾನಿ ಬೂತ್ ರಚನೆ ಬಗ್ಗೆ ಒಗ್ಗಟ್ಟಿನಲ್ಲಿ ಮುನ್ನಡೆಯಲು ಈ ಅವಲೋಕನ ಸಭೆ ಪ್ರಯೋಜನಕಾರಿಯಾಗಲಿದೆ.

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆಯು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಫೆ. 13 ರಂದು ಜರುಗಿತು. ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಬೃಜೇಶ್ ಚೌಟ, ಶಾರದಾ ಆರ್ ರೈ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಭಾಗೀರಥಿ ಮುರುಳ್ಯ, ತಾ. ಪಂ ಉಪಾಧ್ಯಕ್ಷೆ ವೇದಾವತಿ, ತಾಲೂಕು ಪ್ರ. ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ್ ಬಿ. ಎಸ್ ಬೆಳಾಲು, ಇವರುಗಳು ವೇದಿಕೆಯಲ್ಲಿದ್ದರು. ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಉಮೇಶ್ ಸ್ವಾಗತಿಸಿದರು. ಭಾಸ್ಕರ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ತಾಲೂಕು ಸಮಿತಿ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಉಪಸಮಿತಿಗಳ 3 ತಿಂಗಳ ಕಾರ್ಯಚಟುವಟಿಕೆಗಳ ವರದಿ ಮಂಡನೆ ಮತ್ತು ಅವಲೋಕನ ನಡೆಯಿತು. ಸಾಂಘಿಕ ತರಬೇತಿ, ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ವಿಮರ್ಷೆ ನಡೆಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.