ಸೇವಾ ಭಾರತಿಯಿಂದ ಫೆ.18ರಂದು ವಿಶೇಷ ಕಾರ್ಯಗಳು ಲೋಕಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1

sevabharathi pressmeet copy  ಕನ್ಯಾಡಿ: ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ಸಂಸ್ಕಾರ, ಮಹಿಳಾ ಹಾಗೂ ಕೃಷಿ ವಿಭಾಗಗಳ ಮೂಲಕ ಸೇವಾ ಕಾರ್ಯವನ್ನು ಮಾಡುತ್ತಿರುವ ಧರ್ಮಸ್ಥಳ ಕನ್ಯಾಡಿಯ ಸೇವಾಭಾರತಿ ವತಿಯಿಂದ 14ನೇ ವರ್ಷದ ಸಂಭ್ರಮದಲ್ಲಿ ವಿಶೇಷ ಸೇವಾ ಕಾರ್ಯಗಳು ಫೆ.18ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ತಿಳಿಸಿದರು. ಅವರು ಜ.30ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಫೆ.18 ಬೆಳಗ್ಗೆ ಕನ್ಯಾಡಿ|| ಶಾಲಾ ವಠಾರದಲ್ಲಿ ನಡೆಯುವ ವಾರ್ಷಿಕ ಸಮಾರಂಭದಲ್ಲಿ 41 ಗ್ರಾಮಗಳ 41 ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕಗಳ ವಿತರಣೆ, 10 ಅರ್ಹ ಮನೆಗಳಿಗೆ ಉಚಿತ ಸೋಲಾರ್ ದೀಪಗಳ ವಿತರಣೆ, ವಿಶೇಷ ಸೇವಾ ಕಾರ್ಯಕರ್ತರಿಗೆ ಇಬ್ಬರು ವ್ಯಕ್ತಿಗಳಿಗೆ, ಮತ್ತು ಎರಡು ಸಂಸ್ಥೆಗಳಿಗೆ ಗೌರವ ಸನ್ಮಾನ, ವಿಶೇಷ ಚೇತನರಿಗೆ ಗಾಳಿ ಕುರ್ಚಿ ವಿತರಣೆ, ಉಚಿತ ಕಂಪ್ಯೂಟರ್ ತರಬೇತಿ ಮತ್ತು ಮೊಬೈಲ್ ಬ್ಯಾಂಕಿಂಗ್ ಮಾಹಿತಿ ನಡೆಯಲಿದೆ ಎಂದು ಹೇಳಿದರು. ಫೆ.12ರಂದು 241 ಶಾಲೆಗಳ 650 ಅಡುಗೆ ಸಹಾಯಕರಿಗೆ ರಕ್ಷಾ ಕವಚಗಳ (ಎಪ್ರಾನ್) ವಿತರಣೆ ಬೆಳ್ತಂಗಡಿ ಶ್ರೀ ಧ.ಮಂ. ಕಲಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಬೆಳ್ತಂಗಡಿಯ ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ಉದ್ಘಾಟಿಸಲಿದ್ದು, ದಿಕ್ಸೂಚಿ ಭಾಷಣವನ್ನು ಯುವ ಭಾರತ್ ರಾಜ್ಯ ಪ್ರಭಾರಿ ನಿಕೇತರಾಜ್ ಮತ್ತು ಅತಿಥಿಗಳಾಗಿ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೆ.ಜಿ. ಲಕ್ಷ್ಮಣ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ವತ್ಸಲಾ ಭಟ್ ಮತ್ತು ರಾಜ್‌ಪ್ರಕಾಶ್ ಕೊರ್ನಾಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.