ನ.18ರಿಂದ ಭೂಮಿ ಹಕ್ಕಿಗಾಗಿ ಚಳವಳಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ನ.18 ರಿಂದ ಕರ್ನಾಟಕ ರಾಜ್ಯದಾದ್ಯಂತ ಭೂಮಿಯ ಹಕ್ಕಿಗಾಗಿ ರೈತ, ಕಾರ್ಮಿಕರ ಚಳವಳಿ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಹಾಗೂ ಭೂಮಿ ಹಕ್ಕಿಗಾಗಿ ಕಮ್ಯೂನಿಸ್ಟ್ ಚಳವಳಿಯ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಪಟ್ರಮೆ ಅಧ್ಯಕ್ಷ ಲಕ್ಷ್ಮಣ ಗೌಡ ಕಳೆಂಜ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದಾದ್ಯಂತ ಕೆಪಿಆರ್‌ಎಸ್., ಸಿಐಟಿಯು, ಡಿ.ವೈ.ಎಫ್.ಐ., ಎಸ್.ಎಫ್.ಐ., ಜೆ.ಎಂ.ಎಸ್, ಆದಿವಾಸಿ ದಲಿತ ಸಂಘಟನೆಗಳು ಜಂಟಿಯಾಗಿ ಭೂಮಿ ಹೋರಾಟ ಸಮಿತಿ, ನಿವೇಶನ ಹೋರಾಟ ಸಮಿತಿ ಮೊದಲಾದ ಹೆಸರಲ್ಲಿ ಭೂಮಿಯ ಹಕ್ಕು ಸಿಗುವ ತನಕ ನಿರ್ಣಾಯಕ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ದ,ಕ, ಜಿಲ್ಲಾ ಕೇಂದ್ರದಲ್ಲಿ ಡಿಸಿ ಕಚೇರಿ ಎದುರು ನ.18 ರಂದು ರೈತ ಕಾರ್ಮಿಕರ ಬೃಹತ್ ಜೈಲ್ ಭರೋ ಚಳವಳಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಬೆಳ್ತಂಗಡಿ ತಾಲೂಕಾದ್ಯಂತ ನ. 18 ಮತ್ತು 19 ರಂದು ಭೂಮಿಹಕ್ಕಿಗಾಗಿ ಕಮ್ಯೂನಿಷ್ಟ್ ಚಳವಳಿಯು ಬೈಕ್ ಜಾಥಾ ನ.21 ರಂದು ಸಾವಿರಾರು ರೈತರ ಜೈಲ್ ಭರೋ ಚಳವಳಿಯು ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಹೋರಾಟದಲ್ಲಿ ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.