HomePage_Banner_
HomePage_Banner_

ಸಂಪಾಜೆ: ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ

Sampaje Yakshothava 3

ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಈ ಬಾರಿ ಸಂಪಾಜೆ ಯಕ್ಷೋತ್ಸವದ ಮುನ್ನ 3 ದಿನ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ ನಡೆಯಿತು.

Sampaje Yakshothava 2

ನ. ೨ರಂದು ಆರಂಭಗೊಂಡ ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆಯನ್ನು ಪ್ರತಿಷ್ಠಾನದ ಕಾರ್ಯದರ್ಶಿ ಸುಮನಾ ಶ್ಯಾಂ ಭಟ್ ಉದ್ಘಾಟಿಸಿದರು. ಒಟ್ಟು ೧೮ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮೊದಲ ದಿನ ೮ ತಂಡಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ನ. ೩ರಂದು ಮತ್ತೆ ೮ ತಂಡಗಳಿಂದ ಯಕ್ಷಗಾನ ನಡೆಯುತ್ತಿದ್ದು, ನ.೪ರಂದು ೨ ತಂಡಗಳಿಂದ ಯಕ್ಷಗಾನ ಸ್ಪರ್ಧೆ ನಡೆದು, ಬಳಿಕ ಸಂಪಾಜೆ ಯಕ್ಷೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ.

 

Sampaje Yakshothava 1

 ಕಾರ್ಯಕ್ರಮದಲ್ಲಿ ವಿಜೇತ ಹವ್ಯಾಸಿ ಯಕ್ಷಗಾನ ಕಲಾವಿದರ ತಂಡಕ್ಕೆ ಬಹುಮಾನ ವಿತರಿಸಲಾಗುತ್ತದೆ. ಸ್ಪರ್ಧೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಾನ ಕೋಶಾಧಿಕಾರಿ ಮುರಳೀಧರ ಕೆ.ಜಿ., ಸದಸ್ಯರುಗಳಾದ ಕೊಂದಲಕಾಡು ನಾರಾಯಣ ಭಟ್, ರವಿಶಂಕರ ಕಿಳಿಂಗಾಡು, ಮನೋಜ್ ಎನ್.ಶಾಸ್ತ್ರಿ, ಯಕ್ಷಗಾನ ಕಲಾಪೋಷಕರಾದ ಡಾ. ಶ್ಯಾಮ್ ಭಟ್ ಹಾಗೂ ಸ್ಪರ್ಧೆಯ ತೀರ್ಪುಗಾರರಾದ ಹಿರಿಯ ಯಕ್ಷಗಾನ ಕಲಾವಿದರಾದ ಪದ್ಯಾಣ ಶಂಕರ ನಾರಾಯಣ ಭಟ್, ಶಿವರಾಮ ಜೋಗಿ, ಉಬರಡ್ಕ ಉಮೇಶ್ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್, ತಾರನಾಥ್ ವರ್ಕಾಡಿ ಉಪಸ್ಥಿತರಿದ್ದರು. ವಾಸುದೇವ ರಂಗಾ ಭಟ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.