ಎಡಮಂಗಲ ಬಂಟರ ಸಂಘದ ಸಭೆ

ಎಡಮಂಗಲ ಗ್ರಾಮದ ಕಿನ್ಯಾಳ ಜಗದೀಶ್ ರೈಯವರ ಮನೆಯಲ್ಲಿ ಬಾಳಿಲ ವಲಯದ ಬಂಟರ ಸಂಘದ ವತಿಯಿಂದ ಸಭೆ ನಡೆಯಿತು. ಮಾಲೆಂಗಿರಿ ರಾಮಕೃಷ್ಣ ರೈ ಸಭಾಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್.ರೈ, ತಾಲೂಕು ಬಂಟರ ಸಂಘದ ಉಪಾಧ್ಯಕ್ಷರಾದ ಎನ್.ಜಿ.ಪ್ರಭಾಕರ ರೈ, ದಯಾಕರ ಆಳ್ವ ಕುಂಬ್ರ, ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ಬಾಳಿಲ ವಲಯಾಧ್ಯಕ್ಷ ಚಂದ್ರಹಾಸ ರೈ, ಗೌರವಾಧ್ಯಕ್ಷ ವಿಠಲ ರೈ ಪೋಳಾಜೆ, ಮಹಿಳಾ ಘಟಕಾಧ್ಯಕ್ಷೆ ನಳಿನಿ ಬಾಲಕೃಷ್ಣ ರೈ ವೇದಿಕೆಯಲ್ಲಿದ್ದರು.
ನಿವೃತ್ತ ಗ್ರಾಮಕರಣಿಕ ಹೊಸಮನೆ ಬಾಲಕೃಷ್ಣ ರೈ ಕೆ.ಎಸ್. ಪರೀಕ್ಷೆಯಲ್ಲಿ ರ‍್ಯಾಂಕ್ ಅಸಿಸ್ಟೆಂಟ್ ಕಮೀಷನರ್ ಅಜಿತ್ ರೈ ಮಾಲೆಂಗಿರಿ ಹಾಗೂ ಗ್ರಾಮದ ಪೊಯ್ಯೆತ್ತೂರು ನಾರಾಯಣ ರೈಯವರ ಪುತ್ರಿ ವಿದ್ಯಾರ್ಥಿನಿ ಜ್ಯೋತಿಯವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ವಿಜಯ ರೈ ಮಾಲೆಂಗಿರಿ ಸನ್ಮಾನಿತರನ್ನು ಪರಿಚಯಿಸಿದರು. ಸೀತಾರಾಮ ರೈ ಪ್ರಾರ್ಥಿಸಿದರು. ಯತೀಂದ್ರನಾಥ ರೈ ಸ್ವಾಗತಿಸಿದರು. ಬಾಳಿಲ ಯುವ ಘಟಕಾಧ್ಯಕ್ಷ ಸುಜಿತ್ ರೈ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.