ಕಾಯರ್ತೋಡಿ ಮಿತ್ರಬಳಗದಿಂದ ಹಗ್ಗಜಗ್ಗಾಟ ಹಾಗೂ ವಾಲಿಬಾಲ್ ಪಂದ್ಯಾಟ

Kayarthodi Haggajaggata
ರಾಜ್ಯಪ್ರಶಸ್ತಿ ಪುರಸ್ಕೃತ ಮಿತ್ರ ಬಳಗ ರಿ. ಕಾಯರ್ತೋಡಿ ಸುಳ್ಯ ಇದರ ವತಿಯಿಂದ ದೀಪಾವಳಿ ಪ್ರಯುಕ್ತ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಕಾಯರ್ತೋಡಿ ಬೈಲಿನಲ್ಲಿ ಅ.೨೨ರಂದು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುನಿಲ್‌ರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೋಹನ ಮಾಸ್ತರ್ ಪೆರಾಜೆ, ಎ.ಸಿ.ವಸಂತ, ಪ್ರಶಾಂತ ಕಾಯರ್ತೋಡಿ, ನಾರಾಯಣ ಕಾಯರ್ತೋಡಿ ಹಾಗೂ ಚಿದಾನಂದ ಕುದ್ಪಾಜೆ ಉಪಸ್ಥಿತರಿದ್ದರು. ದೇವಿಪ್ರಸಾದ್ ಜಿ.ಸಿ. ಸ್ವಾಗತಿಸಿ, ಉಪಾಧ್ಯಕ್ಷ ದೇವರಾಜ್ ಕುದ್ಪಾಜೆ ವಂದಿಸಿದರು. ದೇವಿಪ್ರಸಾದ್ ಎ. ಕಾರ್ಯಕ್ರಮ ನಿರೂಪಿಸಿದರು. ಹಗ್ಗಜಗ್ಗಾಟದಲ್ಲಿ ವಿಷ್ಣು ಬಳಗ ಅಡ್ಕ ಪ್ರಥಮ, ವಿಷ್ಣು ಬಳಗ ಸಂಪ್ಯ ಪುತ್ತೂರು ದ್ವಿತೀಯ, ಪಾಣೆಮಂಗಳೂರು ತಂಡ ತೃತೀಯ, ಶ್ರೀ ದುರ್ಗಾ ಬಲ್ಕಾಡಿ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.