ಅಜ್ಜಾವರ-ಮಂಡೆಕೋಲು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ – ರಸ್ತೆ ತಡೆ

Advt_NewsUnder_1
Advt_NewsUnder_1
Advt_NewsUnder_1

೧ ತಿಂಗಳೊಳಗೆ ರಸ್ತೆ ಟೆಂಡರ್ ಆಗದಿದ್ದರೆ ಮಂಡೆಕೋಲಿನಿಂದ ಸುಳ್ಯದವರೆಗೆ ಪಾದಯಾತ್ರೆಯ ಘೋಷಣೆ
ಕಾಂಗ್ರೆಸ್, ಎ.ಎ.ಪಿ., ಜೆ.ಡಿ.ಎಸ್., ಬಿ.ಜೆ.ಪಿ.ಯಲ್ಲಿ ಗುರುತಿಸಿಕೊಂಡವರಿಂದ ಬೆಂಬಲ
ಎಸ್.ಕೆ.ಎಸ್.ಎಸ್.ಎಫ್., ದ.ಸಂ.ಸಮಿತಿ, ಕ.ರಾ.ವೇ., ಬೆನಕ ಕ್ರೀಡಾ-ಕಲಾ ಸಂಘದವರು ಭಾಗಿ
ಕಾಂತಮಂಗಲ-ಅಜ್ಜಾವರ-ಮಂಡೆಕೋಲು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಜ್ಜಾವರ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನಾ ಸಭೆಯು ಅ.೧೭ರಂದು ಕಾಂತಮಂಗಲ ಅಪ್ಪಾಜಿರಾವ್ ವೃತ್ತದ ಬಳಿ ನಡೆಯಿತು. ಪ್ರತಿಭಟನೆಯ ಬಳಿಕ ೧೦ ನಿಮಿಷಗಳ ಕಾಲ ರಸ್ತೆ ತಡೆ ಮಾಡಲಾಯಿತು. ಮೇನಾಲದ ವಿನಯ್ ಆಳ್ವರವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ರಸ್ತೆಯಿಂದಾಗಿ ಆರೋಗ್ಯ ಸಮಸ್ಯೆ : ಮಹೇಶ್ ರೈ
ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ರೈ ಮೇನಾಲರು ಮಾತನಾಡಿ “ಈ ರಸ್ತೆಯಲ್ಲಿ ದಿನವೊಂದಕ್ಕೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೇರೆ ಬೇರೆ ಉದ್ಯೋಗ ಸೇರಿದಂತೆ ದಿನವೊಂಕ್ಕೆ ಸಾವಿರಾರು ಮಂದಿ ಓಡಾಡುತ್ತಿದ್ದಾರೆ. ಸಾಕಷ್ಟು ವಾಹನಗಳು ಸಂಚರಿಸುತ್ತಿದೆ. ಆದರೆ ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಇಂದು ಜನರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ನಾವೆಲ್ಲರೂ ರಾಜಕೀಯವನ್ನು ಬದಿಗಿಟ್ಟು ರಸ್ತೆ ಅಭಿವೃದ್ಧಿ ಆಗಲು ಎಲ್ಲರೂ ಆಗ್ರಹಿಸಬೇಕು ಎಂದರು.
ಪಾದಯಾತ್ರೆ ಮಾಡುತ್ತೇವೆ : ಕೋಡ್ತುಗುಳಿ
ಪ್ರತಿಭಟನೆಯಲ್ಲಿ ಮಾತನಾಡಿದ ಜೆ.ಡಿ.ಎಸ್. ಪ್ರಮುಖ ಸುಕುಮಾರ್ ಕೋಡ್ತುಗುಳಿಯವರು “ಈ ರಸ್ತೆಯಲ್ಲಿ ನಾನು ೧೪-೧೫ ವರ್ಷದಿಂದ ಹೋಗುತ್ತಿzವೆ. ಅಂದು ಹೇಗಿದೆಯೋ ಅದಕ್ಕಿಂತ ತುಂಬಾ ಹದಗೆಟ್ಟಿದೆ. ಈ ಭಾಗದ ಜನರ ಮತ ಪಡೆದು ಆರಿಸಿ ಬಂದ ಜನ ಪ್ರತಿನಿಧಿಗಳು ಈ ರಸ್ತೆಯ ಬಗ್ಗೆ ಗಮನ ಹರಿಸಬೇಕು. ಆದರೆ ಅವರು ಗಮನ ಹರಿಸದಿರುವುದು ದುರಾದೃಷ್ಟಕರ. ಜನರ ಸಮಸ್ಯೆಯನ್ನು ಜನ ಪ್ರತಿನಿಧಿ ಅರಿತು ಕೆಲಸ ಮಾಡಬೇಕು. ಜನರೇ ರಸ್ತೆಗೆ ಇಳಿಯುವಂತೆ ಮಾಡಬಾರದು. ಹಾಗೆ ಮಾಡಲು ಅವಕಾಶ ನೀಡುವ ಜನ ಪ್ರತಿನಿಧಿ ರಾಜೀನಾಮೆ ನೀಡಿ ಮನೆ ಹೋಗುವುದು ಒಳ್ಳೆಯದು. ನಮ್ಮ ಶಾಸಕರು ೪-೫ ಬಾರಿ ಗೆದ್ದು ಬಂದಿದ್ದಾರೆ. ತಾಲೂಕಿನ ರಸ್ತೆಗಳ ಗಲ್ಲಿ ಗಲ್ಲಿಗಳು ಅವರಿಗೆ ಗೊತ್ತಿದೆ. ಅದರ ಪರಿಸ್ಥಿತಿಯೂ ಗೊತ್ತಿದೆ. ಅಜ್ಜಾವರ ರಸ್ತೆಯ ಬಗ್ಗೆ ಗೊತ್ತಿದ್ದರೂ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಇಲ್ಲಿಯ ಬಗ್ಗೆ ಅವರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಹೇಳಿದ ಸುಕುಮಾರ್‌ರವರು ಅಭಿವೃದ್ಧಿಗೆ ತೊಡಕಿದ್ದರೆ ಅವರು ವಿಧಾನ ಸಭೆಯಲ್ಲಿ ಪ್ರಶ್ನಿಸಬೇಕು ಎಂದರಲ್ಲದೆ, ೧೫ ದಿನದೊಳಗೆ ಈ ರಸ್ತೆಯ ಹೊಂಡಗುಂಡಿಗಳು ಮುಚ್ಚಬೇಕು. ೧ ತಿಂಗಳೊಳಗೆ ಟೆಂಡರ್ ಆಗಿ ಸಾರ್ವಕಾಲಿಕ ರಸ್ತೆ ಅಭಿವೃದ್ಧಿಗೆ ಚಾಲನೆ ದೊರೆಯಬೇಕು. ಇಲ್ಲವಾದರೆ ಮಂಡೆಕೋಲಿನಿಂದ ಸುಳ್ಯದವರೆಗೆ ಪಾದಯಾತ್ರೆ ನಡೆಸುತ್ತೇವೆ“ ಎಂದು ಅವರು ಹೇಳಿದರು.
ನಮ್ಮ ಹಕ್ಕುಗಳನ್ನು ಪ್ರಶ್ನಿಸಿ : ಎಡಮಲೆ
ಎ.ಎ.ಪಿ. ಮುಖಂಡ ಅಶೋಕ್ ಎಡಮಲೆ ಮಾತನಾಡಿ “ನಮ್ಮ ಹಕ್ಕಿನ ಕುರಿತು ಎಲ್ಲರೂ ಮಾತನಾಡಬೇಕು. ಅನುದಾನ ಬಿಡುಗಡೆಯಾದರೂ ರಸ್ತೆ ಅಭಿವೃದ್ಧಿ ಯಾಕೆ ಆಗಿಲ್ಲ ಎನ್ನುವುದನ್ನು ನಾವೆಲ್ಲರೂ ಪ್ರಶ್ನೆ ಮಾಡಬೇಕು“ ಎಂದು ಹೇಳಿದರು.
ಅಭಿವೃದ್ಧಿ ಮಾಡಲಾಗದ ಬಿಜೆಪಿಯಿಂದ ಕುಂಟು ನೆಪ : ಜೆ.ಪಿ. ರೈ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಮಾತನಾಡಿ “ರೂ.೪ ಕೋಟಿ ಅನುದಾನ ಮಂಜುರಾಗಿತ್ತು. ಅದನ್ನು ಬೇರೆಡೆಗೆ ಶಾಸಕರು ಡೈವರ್ಟ್ ಮಾಡಿದ್ದಾರೆ. ಬಳಿಕ ಸಿಆರ್‌ಎಫ್ ನಿಂದ ೬ ಕೋಟಿ ಈ ರಸ್ತೆ ಅಭಿವೃದ್ಧಿಗೆ ಬಂದಿದ್ದು, ಅದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಈ ಪ್ರಕ್ರಿಯೆಗಳು ನಡೆದು ನಾಳಿನ ಚುನಾವಣೆಯ ಸಂದರ್ಭದಲ್ಲಿ ರಸ್ತೆ ಆಗುವುದಿಲ್ಲವೆಂದು ಬಿಜೆಪಿಯವರಿಗೆ ಭಯವಿದೆ. ಅದಕ್ಕೆ ಅವರು ಸರಕಾರದ ಮೇಲೆ ಕುಂಟು ನೆಪ ಹೇಳುತ್ತಿದ್ದಾರೆ. ಇದರ ಬಗ್ಗೆ ಸತ್ಯವನ್ನು ಎಲ್ಲರೂ ತಿಳಿದು ಕೊಳ್ಳಬೇಕು. ಅಭಿವೃದ್ಧಿಗೆ ಕೆಲಸಕ್ಕೆ ಸರಕಾರವಾಗಲೀ, ಅಥವಾ ರಮಾನಾಥ ರೈಯವರು ಯಾವತ್ತೂ ಅಡ್ಡ ಬರುವುದಿಲ್ಲ. ಹಾಗೊಂದು ವೇಳೆ ತಡೆ ಇದ್ದರೆ ಎಲ್ಲಿ ತಡೆ ಎಂದು ಆರೋಪ ಮಾಡುವವರು ಸ್ಪಷ್ಟವಾಗಿ ಹೇಳಲಿ. ಅದನ್ನು ನಾವು ಸರಿ ಪಡಿಸುತ್ತೇವೆ. ಕಾಂಗ್ರೆಸ್ ತಡೆ ಮಾಡಿದೆ ಎಂದಾದರೆ ನಾವೂ ಬಿಜೆಪಿಯವರೊಂದಿಗೆ ಪ್ರತಿಭಟನೆಗೆ ಕೂರುತ್ತೇವೆ“ ಎಂದು ಹೇಳಿದರಲ್ಲದೆ, “ಎಂ.ಎಲ್.ಎ.ಯವರಿಗೆ ಟೆಂಡರ್ ಪ್ರಕ್ರಿಯೆ ಮಾಡಿಸಲು ಸಾಧ್ಯವಿಲ್ಲವೆಂದಾದರೆ ಅದು ನಾಚಿಕೆ ಗೇಡಿನ ಸಂಗತಿ. ಅದಕ್ಕಾಗಿ ವಿವೇಕಾನಂದ ಸರ್ಕಲ್ ಬಳಿ ಪ್ರತಿಭಟನೆ ಮಾಡುವುದಲ್ಲ. ರಾಷ್ಟ್ರೀಯ ಹೆದ್ದಾರಿ ಲಾಖೆಯ ಎದುರು ಪ್ರತಿಭಟನೆ ಮಾಡಬೇಕು“ ಎಂದು ಹೇಳಿದರು.
ಬಿಜೆಪಿಯವರು ಇದುವರೆಗೆ ಭ್ರಮಾ ಲೋಕ ಸೃಷ್ಠಿ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದು ಈ ಬಾರಿ ಜನರು ಎಚ್ಚತ್ತುಕೊಂಡಿದ್ದಾರೆ. ಎಲ್ಲರೂ ಜಾಣರಾಗಿದ್ದಾರೆ. ಆದ್ದರಿಂದ ಬಿಜೆಪಿಯವರು ಈ ರೀತಿಯ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ“ ಎಂದು ಜೆ.ಪಿ. ರೈ ಹೇಳಿದರು.
ಶಾಸಕರು, ಸಂಸದರನ್ನು ಪ್ರಶ್ನಿಸಿ : ಅಡ್ಪಂಗಾಯ
ಜಿ.ಪಂ. ಮಾಜಿ ಸದಸ್ಯ ಧನಂಜಯ ಅಡ್ಪಂಗಾಯರು ಮಾತನಾಡಿ “ಇಲ್ಲಿಯ ಶಾಸಕರು ವಾಜಪೇಯಿಯವರ ಕಾಲದಿಂದಲೂ ಶಾಸಕರಾಗಿದ್ದಾರೆ. ಈ ರಸ್ತೆ ಅಭಿವೃದ್ಧಿ ಪಡಿಸಲು ಇಷ್ಟರವರೆಗೆ ಕಾಯೋದು ಯಾಕೆ?. ಅವರಿಗೆ ರಸ್ತೆ ಅಭಿವೃದ್ಧಿ ಯಾಕೆ ಸಾಧ್ಯವಾಗಿಲ್ಲ. ಶಾಸಕರು, ಸಂಸದರಿಗೆ ಸಿ.ಆರ್.ಎಫ್. ಫಂಡ್ ಬಿಟ್ಟರೆ ಬೇರೆ ಅನುದಾನವೇ ಇಲ್ಲವೆ“ ಇಲ್ಲಿಯ ಜನರು ಶಾಸಕರಿಗೆ ಮತ ಹಾಕಿ ಅವರನ್ನು ಗೆಲ್ಲಿಸಿದ್ದೀರಿ. ನಿಮ್ಮ ರಸ್ತೆ ಬಗ್ಗೆ ಸರಕಾರ, ರಮಾನಾಥ ರೈಯವರನ್ನು ದೂರುವ ಬದಲು, ಇಲ್ಲಿ ಆರಿಸಿ ಬಂದ, ಶಾಸಕರು, ಸಂಸದರನ್ನೇ ನೀವು ಪ್ರಶ್ನೆ ಮಾಡಬೇಕು“ ಎಂದು ಹೇಳಿದರು.
ರಸ್ತೆ ಅಭಿವೃದ್ಧಿಯಾಗಲೀ : ಶಾಫಿ ದಾರಿಮಿ
ಎಸ್.ಕೆ.ಎಸ್.ಎಸ್.ಎಫ್. ಪ್ರಮುಖ ಶಾಫಿ ದಾರಿಮಿಯವರು “ಈ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ನಾವು ಈ ಹಿಂದೆಯೇ ಪಾದಯಾತ್ರೆ ಮಾಡಿದ್ದೆವು. ಆದರೂ ಆಗಲಿಲ್ಲ. ಈ ಬಾರಿಯಾದರೂ ಈ ರಸ್ತೆ ಅಭಿವೃದ್ಧಿಯಾಗಿ ಜನರ ಉಪಯೋಗಕ್ಕೆ ಸಿಗಲಿ“ ಎಂದು ಹೇಳಿದರು.
ರಾಜಕೀಯ ಬೇಡ : ಗೋಕುಲ್‌ದಾಸ್
ನ.ಪಂ.ಸದಸ್ಯ ಗೋಕುಲ್ ದಾಸ್, ಮಾತನಾಡಿ “ಸುಳ್ಯದಲ್ಲಿ ನಾಲ್ಕುಮಂದಿ ಜಿ.ಪಂ. ಸದಸ್ಯರಿದ್ದಾರೆ. ಮೂಲಭೂತ ಅವಶ್ಯಕತೆಯಾದ ರಸ್ತೆ ಅಭಿವೃದ್ಧಿಯ ಕುರಿತು ಮಾತನಾಡುವುದು ಬಿಟ್ಟು ಪಿ.ಡಿ.ಒ. ನಿಯೋಜನೆಯ ಕುರಿತು ರಾಜಕೀಯ ಮಾತನಾಡುತ್ತಾರೆ. ಅವರಿಗೆ ಅಭಿವೃದ್ಧಿಯ ಯೋಚನೆಯೇ ಇರುವುದಿಲ್ಲ“ ಎಂದು ಹೇಳಿದರು.
ಜಿಲ್ಲೆಗೆ ಬೆಂಕಿ ಹಾಕುವ ಮಾತನಾಡುವ ಸಂಸದರಿಗೆ ಅಭಿವೃದ್ಧಿ ಯಾಕಾಗುತ್ತಿಲ್ಲ : ಮೇನಾಲ
ಅಕ್ರಮ ಸಕ್ರಮ ಸಮಿತಿ ಸದಸ್ಯ ಸುಧೀರ್ ರೈ ಮೇನಾಲರವರು “ಅಡ್ಪಂಗಾಯರು ಜಿ.ಪಂ.ಸದಸ್ಯರಾಗಿದ್ದಾಗ ಕೇವಲ ೨೬ ದಿನಗಳಲ್ಲಿ ಅಡ್ಕಾರು ಸೇತುವೆ ಮಾಡಿದ್ದಾರೆ. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿದ್ದ ದಿವ್ಯಪ್ರಭಾರವರು ಅರಂಬೂರು ಸೇತುವೆ ಮಾಡಿಸುತ್ತಾರೆ. ಅಂಗಾರರು ೨೫ ವರ್ಷದಿಂದ ಶಾಸಕರಾಗಿದ್ದರೂ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯಾಕೆ ಸಾಧ್ಯವಾಗಿಲ್ಲ?“ ಎಂದು ಪ್ರಶ್ನಿಸಿದಲ್ಲದೆ, ಶಾಸಕರು, ಸಂಸದರಿಗೆ ಅಭಿವೃದ್ಧಿ ಮಾಡಲು ಆಗುವುದಿಲ್ಲವೆಂಬ ಕಾರಣಕ್ಕೆ ನೀವು ವಿನಾಕಾರಣ ಉಸ್ತುವಾರಿ ಸಚಿವರು, ಸರಕಾರದ ವಿರುದ್ಧ ಗೂಬೆ ಕೂರಿಸುವುದು ಸರಿಯಲ್ಲ. ಸಂಸದರು ಜಿಲ್ಲೆಗೆ ಬೆಂಕಿ ಹಾಕುವ ಮಾತನಾಡುತ್ತಾರೆ ಹೊರತು ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ ಯಾಕೆ?“ ಎಂದು ಹೇಳಿದರು.
ಶಾಸಕರು ಪ್ರಶ್ನಿಸಲಿ : ಚಂದ್ರಶೇಖರ್
ದ.ಸಂ.ಸಮಿತಿಯ ಚಂದ್ರಶೇಖರ ಪಲ್ಲತಡ್ಕ ಮಾತನಾಡಿ “ಈ ರಸ್ತೆ ಅತೀ ಅಗತ್ಯವಾಗಿ ಆಗಬೇಕಾದುದು. ಶಾಸಕರು ಇದನ್ನು ಮಾಡಿಸಬೇಕು. ನಮ್ಮ ಪರವಾಗಿ ಅವರು ವಿಧಾನ ಸಭೆಯಲ್ಲಿ ಪ್ರಶ್ನಿಸಬೇಕು“ ಎಂದು ಹೇಳಿದರು.
ಮೂಲಭೂತ ಸೌಕರ್ಯ ಒದಗಿಸಿ : ಸ್ವಾಮೀಜಿ
ಚೈತನ್ಯ ಸೇವಾಶ್ರಮದ ಯೋಗೇಶ್ವರಾನಂದ ಸ್ವಾಮೀಜಿ “ಜನರು ಜನ ಪ್ರತಿನಿಧಿಗಳ ಬಗ್ಗೆ ಕೇಳುತ್ತಿರುವುದು ಮೂಲ ಭೂತ ಸೌಕರ್ಯವನ್ನು. ಅದನ್ನು ಜನಪ್ರತಿನಿಧಿಗಳು ಒದಗಿಸಿ ಕೊಡಬೇಕು“ ಎಂದು ಹೇಳಿದರು.
ಸಹಕಾರ ನೀಡಿ : ರೂಪಾನಂದ
ಅಜ್ಜಾವರ ಗ್ರಾ.ಪಂ. ಸದಸ್ಯ ರೂಪಾನಂದ ಕರ್ಲಪ್ಪಾಡಿ “ರಸ್ತೆ ಅಭಿವೃದ್ಧಿಯ ಕುರಿತು ಯಾರೂ ರಾಜಕೀಯ ಮಾಡುವುದು ಸರಿಯಲ್ಲ. ಕಾಮಗಾರಿ ಆಗಲು ಎಲ್ಲರೂ ಸಹಕಾರ ನೀಡಬೇಕು“ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಮಾಜಿ ಅಧ್ಯಕ್ಷ ಕರುಣಾಕರ ಅಡ್ಪಂಗಾಯ, ಮಾಜಿ ಸದಸ್ಯರುಗಳಾದ ಮೋಹನ್ ಮುಳ್ಯ, ಜಯರಾಮ ಅತ್ಯಡ್ಕ, ಹಸೈನಾರ್ ಹಾಜಿ ಗೋರಡ್ಕ, ಅಜ್ಜಾವರ ಗ್ರಾ.ಪಂ. ಸದಸ್ಯ ಹನೀಫ್ ಅಜ್ಜಾವರ, ಶ್ರೀಧರ ಮೇನಾಲ, ದಾಸಪ್ಪ ಕರಿಯಮೂಲೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಾಫಿ ಕುತ್ತಮೊಟ್ಟೆ, ಉದಯ ಕುಮಾರ್ ಕುಕ್ಕುಡೇಲು, ಎ.ಎ.ಪಿ.ಯ. ರಾಮಕೃಷ್ಣ ಬೀರಮಂಗಲ, ಶಾರೀಕ್ ಮೊಗರ್ಪಣೆ, ಶಿವಪ್ರಸಾದ್ ಮುಳ್ಯ, ಜೂಲಿಯಾನ ಕ್ರಾಸ್ತ, ಬೆನಕ ಕ್ರೀಡಾ ಮತ್ತು ಕಲಾ ಸಂಘದ ಮುರಳಿ ಮಾವಂಜಿ, ಕ.ರ.ವೇ. ಸಂಘದ ಅಶೋಕ್ ಮುಳ್ಯ, ಎಸ್.ಕೆ.ಹನೀಫ್, ಪ್ರದೀಪ್ ಪೂಜಾರಿ ಪೊಡುಂಬ, ಹಮೀದ್ ಸಮ್ಮರ್‌ಕೂಲ್, ರಾಹುಲ್ ಅಡ್ಪಂಗಾಯ, ಧರ್ಮ ಪಾಲ ಕೊಯಿಂಗಾಜೆ, ನಂದರಾಜ ಸಂಕೇಶ, ಗಂಗಾಧರ ಮೇನಾಲ, ಲಕ್ಷ್ಮಣ ಶೆಣೈ, ಶಿವಪ್ಪ ನಾಯ್ಕ್ ದೊಡ್ಡೇರಿ ಸೇರಿದಂತೆ ಸುಮಾರು ೧೦೦ ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಎಸ್.ಐ. ಮಂಜುನಾಥ್ ನೇತೃತ್ವದಲ್ಲಿ ಪೋಲೀಸರು ಸ್ಥಳದಲ್ಲಿ ಬಂದೋಬಸ್ತ್ ವ್ಯವಸ್ಥೆಯಲ್ಲಿದ್ದರು.
ಈ ರಸ್ತೆಯ ಅನುದಾನ ಬೇರೆ ರಸ್ತೆಗೆ ಹೋಗಿದೆ : ನಾಗರಾಜ್
ರೂ.೬ ಕೋಟಿ ಈ ರಸ್ತೆಗೆ ಇದೆ : ಮಹೇಶ್ ಮೇನಾಲ
ಕಾರ್ಯಕ್ರಮ ನಿರೂಪನೆ ಮಾಡಿದ ಅಜ್ಜಾವರ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ನಾಗರಾಜ ಮುಳ್ಯರು ಈ ರಸ್ತೆಗೆ ಇರಿಸಿದ್ದ ೪ ಕೋಟಿ ರೂಪಾಯಿಯನ್ನು ಶಾಸಕರು ಬೇರೆ ಕಡೆ ಕಾಲೊನಿ ರಸ್ತೆ ಅಭಿವೃದ್ಧಿಗೆ ಹಾಕಿದ್ದಾರೆಂಬ ಬಗ್ಗೆ ನಾನು ಪತ್ರಿಕೆಯಲ್ಲಿ ನೋಡಿzನೆ“ ಎಂದು ಹೇಳಿದರು. ಆಗ ಉತ್ತರ ನೀಡಿದ ಮಹೇಶ್ ರೈ ಮೇನಾಲರು “ಒಂದೇ ರಸ್ತೆಗೆ ಎರಡು ಅನುದಾನ ಇಡಲು ಬರುವುದಿಲ್ಲ. ಈ ರಸ್ತೆಗೆ ಸಿ.ಆರ್.ಎಫ್. ಫಂಡ್‌ನಿಂದ ಬಂದಿರುವ ರೂ. ೬ ಕೋಟಿಯನ್ನು ಉಳಿಸಿಕೊಂಡು, ಇನ್ನೂ ೪ ಕೋಟಿ ರೂವನ್ನು ಬೇರೆಡೆ ಇರಿಸಲಾಗಿದೆ. ಯಾರೂ ಯಾರ ಬಗ್ಗೆ ಅಪಪ್ರಚಾರ ಮಾಡಬಾರದು. ಜನರಿಗೆ ಸರಿಯಾದ ಮಾಹಿತಿ ನೀಡಬೇಕು“ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.