ನ.16 : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸ್ವಾಗತ ಸಮಿತಿ, ಸಂಘಟನಾ ಸಮಿತಿ ರಚನೆ ಅ.28 : ಅಕಾಡೆಮಿ ಅಧ್ಯಕ್ಷರು ಸುಳ್ಯಕ್ಕೆ

Untitled-1ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೆ.ವಿ.ಜಿ. ಕಾನೂನು ಕಾಲೇಜು ಸಹಭಾಗಿತ್ವದಲ್ಲಿ ನವೆಂಬರ್ ೧೬ರಂದು ಸುಳ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ದ.ಕ. ಜಿಲ್ಲಾ ಮಟ್ಟದ ಮಾಧ್ಯಮ ಕಾರ್ಯಾ ಗಾರದ ಸಂಘಟನೆಗಾಗಿ ಸ್ವಾಗತ ಸಮಿತಿ ಹಾಗೂ ಸಂಘಟನಾ
ಸಮಿತಿಯನ್ನು ರಚಿಸಲಾಗಿದೆ.
ಅ.೧೮ರಂದು ಅಧ್ಯಕ್ಷ ಶರೀಫ್ ಜಟ್ಟಿಪಳ್ಳರವರ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ, ಅಕಾಡೆಮಿ ಆಫ್ ಲಿಬರಲ್ ಎಜುಕೆಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದರ ಗೌರವಾಧ್ಯಕ್ಷತೆಯಲ್ಲಿ, ಸಾಮಾಜಿಕ ಕಾರ್ಯಕರ್ತರಾಗಿರುವ ಕೆ.ಎಂ.ಮುಸ್ತಫರವರ ಸಂಚಾಲಕತ್ವದಲ್ಲಿ ತಾಲೂಕಿನ ಪ್ರಮುಖ ಸಂಘಟಕರು ಸದಸ್ಯರಾಗಿರುವ ಸ್ವಾಗತ ಸಮಿತಿ ರಚಿಸಲು ನಿರ್ಧರಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈಯವರ ಗೌರವಾಧ್ಯಕ್ಷತೆಯಲ್ಲಿ ಹರೀಶ್ ಬಂಟ್ವಾಳ್ ಅಧ್ಯಕ್ಷರಾಗಿ, ಗಂಗಾಧರ ಮಟ್ಟಿ ಹಾಗೂ ಗಂಗಾಧರ ಕಲ್ಲಪಳ್ಳಿ ಉಪಾಧ್ಯಕ್ಷರಾಗಿ, ದುರ್ಗಾಕುಮಾರ್ ನಾಯರ್‌ಕರೆ ಪ್ರಧಾನ ಕಾರ್ಯದರ್ಶಿಯಾಗಿ, ಜಯಪ್ರಕಾಶ್ ಕುಕ್ಕೆಟ್ಟಿಯವರು ಕೋಶಾಧಿಕಾರಿಯಾಗಿರುವ ಸಂಘಟನಾ ಸಮಿತಿಯನ್ನು ರಚಿಸಲಾಯಿತು.
ಕರ್ನಾಕಟ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ಹಾಗೂ ಕಾರ್ಯದರ್ಶಿ ಶಂಕರಪ್ಪರವರು ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆಗಾಗಿ ಅ.೨೮ರಂದು ಸುಳ್ಯಕ್ಕೆ ಬರಲಿದ್ದು, ಅಂದು ಸ್ವಾಗತ ಸಮಿತಿ ಹಾಗೂ ಸಂಘಟನಾ ಸಮಿತಿ ಸದಸ್ಯರೊಂದಿಗೆ ಅವರು ಚರ್ಚೆ ನಡೆಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.