ನಾಲ್ಕೂರು : ಅರಣ್ಯದೊಳಗೆ ಬೀಜದುಂಡೆ ಬಿತ್ತನೆ

beejadunde bithane copy

ಲಯನ್ಸ್ ಹಾಗೂ ಲಯನೆಸ್ ಕ್ಲಬ್ ಹಾಗೂ ವಿಜಯ ಗ್ರಾಮ ಸಮಿತಿ ನಾಲ್ಕೂರು ಅರಣ್ಯ ಇಲಾಖೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ನಾಲ್ಕೂರು ಗ್ರಾಮದ ಅಂಜಾರಿ ಎಂಬಲ್ಲಿ ಅರಣ್ಯದೊಳಗೆ ಬೀಜ ಬಿತ್ತನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ತ್ಯಾಗರಾಜರವರು ಬೀಜದುಂಡೆ ಬಿತ್ತುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ ವಿಜಯಕುಮಾರ್ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವಿಜಯ ಗ್ರಾಮ ಸಮಿತಿ ನಾಲ್ಕೂರು ಇದರ ಕಾರ್ಯದರ್ಶಿ ದಿನೇಶ್ ಹಾಲೆಮಜಲು, ಅರಣ್ಯ ರಕ್ಷಕ ಧರ್ಣಪ್ಪ ಸೇರಿದಂತೆ ಸುಮಾರು 50ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀಜದುಂಡೆ ಬಿತ್ತಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.