ಮಾಜಿ ಮಂಡಲ ಪ್ರಧಾನ ಕೊಂಗೋಡಿ ವೆಂಕಪ್ಪ ಗೌಡ ನಿಧನ

Venkapp Gowda
ನೆಲ್ಲೂರು ಕೆಮ್ರಾಜೆ ಮಂಡಲ ಪಂಚಾಯತ್ ಪ್ರಧಾನರಾಗಿದ್ದ ಜನತಾದಳದ ಹಿರಿಯ ಮುಖಂಡ ಮರ್ಕಂಜ ಗ್ರಾಮದ ಸೇವಾಜೆ ನಿವಾಸಿ ಕೊಂಗೋಡಿ ವೆಂಕಪ್ಪ ಗೌಡರು ಅ.೧೧ರಂದು ರಾತ್ರಿ ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು. ೧೯೬೧ ರಿಂದ ೬೯ರ ತನಕ ಸುಳ್ಯದಲ್ಲಿ ಬೆರಳೆಣಿಕೆಯಷ್ಟು ವಾಹನಗಳಿದ್ದ ಸಂದರ್ಭ ತಮ್ಮ ಮನೆತನದ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದ ವೆಂಕಪ್ಪ ಗೌಡರು, ಆಸ್ಟಿನ್, ಮೌರಿಸ್, ಲ್ಯಾಂಡ್ ಮಾಸ್ಟರ್ ಮತ್ತು ಅಂಬಾಸಿಡರ್ ಮುಂತಾದ ಕಾರುಗಳಲ್ಲಿ ಪರವೂರುಗಳಿಗೆ ಬಾಡಿಗೆಗೆ ತೆರಳುತ್ತಾ ಜನಪ್ರಿಯರಾಗಿದ್ದರು. ೧೯೭೭ರಿಂದ ೨೦೦೫ರವರೆಗೆ ಮರ್ಕಂಜ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿದ್ದರಲ್ಲದೆ, ೭೮-೭೯, ೮೫-೮೬, ೮೮-೮೯, ೯೦-೯೧ರಲ್ಲಿ ಹಾಗೂ ೧೯೯೨ರಿಂದ ೯೬ರವರೆಗೆ ಮತ್ತು ೨೦೦೩ರಿಂದ ೨೦೦೫ರ ವರೆಗೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜನತಾ ಪಕ್ಷದ ಅವಧಿಯಲ್ಲಿ ನೆಲ್ಲೂರು ಕೆಮ್ರಾಜೆ ಮಂಡಲ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸಿದ್ದರು.
ಸೌಮ್ಯ ಸ್ವಭಾವದವರಾಗಿದ್ದು ಹಿರಿ-ಕಿರಿಯರೊಡನೆ ಸ್ನೇಹ ಭಾವದಿಂದಿರುತ್ತಿದ್ದ ಅವರು ಪುತ್ರರಾದ ಸುದರ್ಶನ ಕೊಂಗೋಡಿ, ಶಶಿ ಗೌಡ ಕೊಂಗೋಡಿ, ಪುತ್ರಿ ಸವಿತಾ ದಿನೇಶ್ ಚೌಡ್ಲು ಸೋಮವಾರಪೇಟೆ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.