ಬೆಳ್ಳಾರೆ : ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ

ಮಾನವರು ಸಹೋದರರು ಸೌಹಾರ್ದ ವೇದಿಕೆ ವತಿಯಿಂದ ಅಕ್ಟೋಬರ್ ೭ ರಂದು ಭಾವೈಕ್ಯತೆಯ ಭಾರತ ಎಂಬ ಶೀರ್ಷಿಕೆಯಲ್ಲಿ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಯು ಬೆಳ್ಳಾರೆಯ ನಮ್ರತಾ ಕಲಾ ಮಂದಿರದಲ್ಲಿ ನಡೆಯಿತು. ಬೆಳ್ಳಾರೆ ಪೊಲೀಸ್ ಠಾಣಾ ಉಪ ನಿರೀಕ್ಷಕ ಚೆಲುವಯ್ಯರವರು ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಭೀಮರಾವ್ ವಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಯುವ ವಾಗ್ಮಿ ಇಕ್ಬಾಲ್ ಬಾಳಿಲ ಸೌಹಾರ್ದತೆ ಕುರಿತು ಪ್ರಾಸ್ತಾವಿಕವಾಗಿ ಭಾಷಣಗೈದರು.
ಬೆಳ್ಳಾರೆ ಜುಮಾ ಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ಹಾಗೂ ಪಂಜ ಚರ್ಚ್ ಧರ್ಮ ಗುರು ಅನಿಲ್ ರೋಷನ್ ಲೋಬೊ ವಿಚಾರಗೋಷ್ಠಿಯಲ್ಲಿ ವಿಚಾರ ಮಂಡಿಸಿದರು. ಸಂಘದ ಅಧ್ಯಕ್ಷ ಅಬ್ದುಲ್ ಅಜ್ಹೀಜ್ಹ್ ಪುಣಚ ಸೌಹಾರ್ದ ಕರಪತ್ರ ಬಿಡುಗಡೆಗಳಿಸಿ ಮಾತನಾಡಿದರು.
ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ಹಾಗೂ ಜ್ಞಾನದೀಪ ಸ್ಥಾಪಕ ಉಮೇಶ್ ಮಣಿಕ್ಕರ ಸಭೆಯನ್ನುzಶಿಸಿ ಮಾತನಾಡಿದರು. ವೇದಿಕೆಯಲ್ಲಿ ಅನ್ಸಾರ್ ಬೆಳ್ಳಾರೆ ರಶೀದ್ ಬೆಳ್ಳಾರೆ ಉಪಸ್ಥಿತರಿದ್ದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ಕವಿಗಳು ಭಾವೈಕ್ಯತೆಯ ಭಾರತ ಎಂಬ ವಿಷಯದಲ್ಲಿ ಕವನ ವಾಚಿಸಿದರು. ಲೇಖಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕವಿ ಅಶೋಕ್ ಕುಮಾರ್ ಕಾಸರಗೋಡ್ ವಂದಿಸಿದರು. ಸಂಘದ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.