ಬೆಳ್ಳಾರೆ ಕಮ್ಯುನಿಟಿ ಪಾಲಿಟೆಕ್ನಿಕ್‌ನಲ್ಲಿ ವಿವಿಧ ಬಗೆಯ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಅಹ್ವಾನ

Advt_NewsUnder_1
Advt_NewsUnder_1
Advt_NewsUnder_1

Suddi logo copy

ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ ಮತ್ತು ಕಮ್ಯುನಿಟಿ ಪಾಲಿಟೆಕ್ನಿಕ್ ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಹಾಗೂ ರಜೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಉಚಿತ ವೃತ್ತಿ ತರಬೇತಿಯನ್ನು ಆಯೋಜಿಸಲಾಗಿದೆ.ಇದಲ್ಲದೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಅಧಿಕೃತ ಪಾಲುದಾರಿಕಾ ತರಬೇತಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಇನ್ನಿತರ ಉಚಿತ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿ ಯು ಸಂಪೂರ್ಣವಾಗಿ ಉಚಿತವಾಗಿದ್ದು ಯವುದೇ ತರಬೇತಿ ಶುಲ್ಕವಿರುವುದಿಲ್ಲ. ತರಬೇತಿ ಯ ನಂತರ ಭಾರತ ಸರ್ಕಾರದ ಎನ್.ಸಿ.ವಿ.ಟಿ. ಪ್ರಮಾಣ ಪತ್ರವನ್ನು ನೀಡಲಾಗುವುದು.
ಈ ತರಬೇತಿಯಲ್ಲಿ ಬೇಸಿಕ್ ಕಂಪ್ಯೂಟರ್ ಅಪ್ಲಿಕೇಶನ್, ಡಿ.ಟಿ.ಪಿ, ಟ್ಯಾಲಿ, ಬ್ಯಾಂಕಿಂಗ್ ಮತ್ತು ಅಕೌಂಟಿಂಗ್, ಉಚಿತ ಟೈಲರಿಂಗ್ ಟೆಕ್ನಾಲಜಿ, ಫ್ಯಾಷನ್ ಡಿಸೈನಿಂಗ್, ಕಸೂತಿ ಬ್ಯುಟಿಷನ್, ಸಾಫ಼್ಟ್ ಸ್ಕಿಲ್ಸ್ ಹಾಗೂ ಬ್ಯುಸಿನೆಸ್ ಮತ್ತು ಕಾಮರ್ಸ್ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತ ಕನಿಷ್ಟ ೧೬ವರ್ಷ ವಯೋಮಿತಿಯೊಳಗಿನ ಹಾಗೂ ೮ ನೇ ತರಗತಿಯಿಂದ ಹೆಚ್ಚು ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವವರು ಟೈಲರಿಂಗ್ ತರಬೇತಿಗೆ ಹಾಗೂ ೧೦ ನೇ ತರಗತಿಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿರುವವರು ಕಂಪ್ಯೂಟರ್ ಹಾಗೂ ಇತರ ತರಬೇತಿಗೆ ಆರ್ಹರಾಗಿರುತ್ತಾರೆ.ಅಲ್ಲದೇ ಸಿದ್ದ ಉಡುಪು ತಯಾರಿಕಾ ತರಬೇತಿಯಲ್ಲಿ ಆಯ್ದ ಅಭ್ಯರ್ಥಿಗಳಿಗೆ ೩೦೦೦ ರೂಪಾಯಿ ಶಿಷ್ಯವೇತನ ನೀಡಲಾಗುವುದು. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರಾಮೀಣ ಪ್ರದೇಶಕ್ಕೆ ಕೊಡಮಾಡುವ ಈ ಯೋಜನೆಯ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಜನತೆ ಪಡೆದುಕೊಳ್ಳಬಹುದಾಗಿದೆ. ಈ ತರಬೇತಿಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ. ಆಸಕ್ತರು ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ೭ ಭಾವಚಿತ್ರ, ವಿದ್ಯಾರ್ಹತೆಯ ಅಂಕಪಟ್ಟಿಯ ನಕಲು ಪ್ರತಿ, ಆಧಾರ್ ಕಾರ್ಡ್ ನಕಲು ಪ್ರತಿ, ಪ.ಜಾ ಮತ್ತು ಪ.ಪಂ ಕ್ಕೆ ಸೇರಿದವರಾಗಿದ್ದರೆ ಜಾತಿಪ್ರಮಾಣ ಪತ್ರ ಮತ್ತು ಪಡಿತರ ಚೀಟಿಯ ನಕಲು ಪ್ರತಿಯೊಂದಿಗೆ ನೇರವಾಗಿ ಪ್ರಾಂಶುಪಾಲರು, ಕಮ್ಯುನಿಟಿ ಪಾಲಿಟೆಕ್ನಿಕ್ ಉಚಿತ ಸ್ವ-ಉದ್ಯೋಗ ತರಬೇತಿ ಸ೦ಸ್ಥೆ, ಶಾಹಿನ್ ಮಹಲ್, ಎರಡನೇ ಮಹಡಿ, ವಿಜಯಾ ಬ್ಯಾಂಕ್ ಕಟ್ಟಡ, ಪ್ರಧಾನ ರಸ್ತೆ,ಬಸ್ಸು ನಿಲ್ದಾಣದ ಎದುರುಗಡೆ, ಬೆಳ್ಳಾರೆ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.