ಅ.8-14: ಬೆಳ್ಳಾರೆಯಲ್ಲಿ ಯಕ್ಷ ರಂಗೋತ್ಸವ – 2017

Advt_NewsUnder_1
Advt_NewsUnder_1
Advt_NewsUnder_1

Suddi logo copy

ಯಕ್ಷರಂಗ ರಿ. ಬೆಳ್ಳಾರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಯಕ್ಷ ರಂಗೋತ್ಸವ – ೨೦೧೭ ಸೆ. ೮ರಿಂದ ಸೆ. ೧೪ರ ವರೆಗೆ ಬೆಳ್ಳಾರೆ ಸ.ಪ.ಪೂ.ಕಾಲೇಜು ನಾರಾಯಣ ಶೇಖ ಸಭಾಭವನದಲ್ಲಿ ನಡೆಯಲಿದೆ. ಅ. ೮ರಂದು ಸಂಜೆ ೬.೩೦ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯುವುದು. ರಾತ್ರಿ ೮ರಿಂದ ಎಂ.ಆರ್. ವಾಸುದೇವ ಸಾಮಗರ ಸಾರಥ್ಯದಲ್ಲಿ ಯಕ್ಷಗಾನ ತಾಳಮದ್ದಲೆ-’ಶ್ರೀರಾಮ ಪಟ್ಟಾಭಿಷೇಕ’ ನಡೆಯಲಿದೆ. ಅ. ೯ರಂದು ಸಂಜೆ ೬ರಿಂದ ’ಶರಸೇತು ಬಂಧ’ ನಡೆಯಲಿದೆ.
ಅ. ೧೦ರಂದು ಸಂಜೆ ೬.೦೦ರಿಂದ ಸಂಯಮ (ರಿ.) ಕೋಟೇಶ್ವರ ತಂಡದ ಕಲಾವಿದರಿಂದ ’ರುಕ್ಮಣಿ ಸ್ವಯಂವರ’ ಯಕ್ಷಗಾನ ಬಯಲಾಟ ನಡೆಯಲಿದ್ದು, ಭಾಗವತರಾಗಿ ಕರುಣಾಕರ ಶೆಟ್ಟಿ ಬಾರ್ಕೂರು ಮುಮ್ಮೇಳದಲ್ಲಿ ವಾಸುದೇವ ಸಾಮಗ, ಪೂಕಳ ಲಕ್ಷ್ಮೀನಾರಾಯಣ ಭಟ್, ರಮೇಶ್ ಆಚಾರ್ಯ, ಈಶ್ವರ ಪ್ರಸಾದ್ ಭಾಗವಹಿಸಲಿದ್ದಾರೆ.
ಅ. ೧೧ರಂದು ಸಂಜೆ ೭.೦೦ರಿಂದ ಶಶಿಕಾಂತ ಶೆಟ್ಟಿ ಕಾರ್ಕಳ ಇವರ ಸಂಯೋಜನೆಯಲ್ಲಿ ಮಹಾಮಂತ್ರಿ ದುಷ್ಟಬುದ್ಧಿ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಭಾಗವತರಾಗಿ ಉದಯ ಪೂಜಾರಿ ಮುಮ್ಮೇಳದಲ್ಲಿ ಕೊಂಡದಕುಳಿ, ಹಳ್ಕಾಡಿ, ಶಶಿಕಾಂತ ಶೆಟ್ಟಿ, ಮಂಕಿ ಈಶ್ವರ ನಾಯ್ಕ, ಪ್ರಸನ್ನ ಶೆಟ್ಟಿಗಾರ್, ನರಸಿಂಹ ಗಾಂವ್ಕರ್ ಪ್ರದೀಪ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ಅ. ೧೨ರಂದು ಸಂಜೆ ೬.೩೦ರಿಂದ ೭.೩೦ ಯಕ್ಷರಂಗ ಬೆಳ್ಳಾರೆ ತಂಡದಿಂದ ಜಾಂಬವತಿ ಕಲ್ಯಾಣ, ೭.೩೦ರಿಂದ ೯.೩೦ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ ಪಾಂಚಜನ್ಯ, ರಾತ್ರಿ ೯.೩೦ರಿಂದ ಯಕ್ಷರಂಗ ಬೆಳ್ಳಾರೆ ತಂಡದಿಂದ ಶ್ರೀರಾಮಾಂಜನೇಯ ನಡೆಯಲಿದೆ.
ಅ. ೧೩ರಂದು ದಕ್ಷಯಜ್ಞ ಯಕ್ಷಗಾನ ಬಯಲಾಟ ನಡೆಯಲಿದೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಪ್ರಸಾದ್ ಬಲಿಪ, ಮುಮ್ಮೇಳದಲ್ಲಿ ಸುಣ್ಣಂಬಳ. ರಂಗಭಟ್, ಹಿಲಿಯಾಣ, ವಳಕ್ಕುಂಜ, ಹರೀಶ್ ಮಣ್ಣಾಪು, ವಾಸುದೇವ ರೈ, ಗೌತಮ್ ಶೆಟ್ಟಿ, ಸತೀಶ್ ನೀರ‍್ಕರೆ ಮತ್ತಿತರರು ಭಾಗವಹಿಸಲಿದ್ದಾರೆ.
ಅ. ೧೪ರಂದು ಸಂಜೆ ೭.೦೦ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು,
ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡರಿಗೆ ಯಕ್ಷರಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಲಿಂಗಪ್ಪ ಬೆಳ್ಳಾರೆ ರಚಿಸಿದ ಯಕ್ಷಗಾನ ಪ್ರಸಂಗವನ್ನು ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಬೆಂಗಳೂರು ಇದರ ಅಧ್ಯಕ್ಷ ಆರ್.ಕೆ. ಭಟ್ ಬೆಳ್ಳಾರೆ ಬಿಡುಗಡೆ ಮಾಡಲಿದ್ದಾರೆ. ರಾತ್ರಿ ೮.೩೦ರಿಂದ ಬಪ್ಪನಾಡು ಮೇಳದ ಕಲಾವಿದರಿಂದ ತುಳು ಯಕ್ಷಗಾನ ಬಯಲಾಟ ’ನಾಗತಂಬಿಲ’ ಜರಗಲಿದೆ.
ಯಕ್ಷರಂಗ ರಿ. ಬೆಳ್ಳಾರೆ ಇದರ ಗೌರವಾಧ್ಯಕ್ಷರಾಗಿ ಕುಂಬ್ರ ದಯಾಕರ ಆಳ್ವ, ಅಧ್ಯಕ್ಷರಾಗಿ ಸುಭಾಶ್ಚಂದ್ರ ರೈ ಬಿ, ಕಾರ್ಯದರ್ಶಿಯಾಗಿ ವಾಸುದೇವ ರೈ ವಿ, ಖಜಾಂಜಿಯಾಗಿ ಲಿಂಗಪ್ಪ ಬೆಳ್ಳಾರೆ ಹಾಗೂ ಗೌರವ ಸಲಹೆಗಾರರಾಗಿ ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.