ಅ.29 : ಬೆಂಗಳೂರಿನ ಗೌಡ ಸಮಾಜದಲ್ಲಿ ಯುವತರಂಗ

Advt_NewsUnder_1
Advt_NewsUnder_1
Advt_NewsUnder_1

Suddi logo copy

“ ಯುವ ಶಕ್ತಿಯು ದೇಶದ ಶಕ್ತಿ” ಎಂದು ಹೇಳುತ್ತಾರೆ . ಹಾಗೆಯೇ ಎಲ್ಲಾ ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅವರಿಗೆ ಹೇಗೆ? ಎಲ್ಲಿ? ಏನು ಮಾಡಬೇಕು? ಅನ್ನುವುದನ್ನು ತಿಳಿಸಿ ಕೊಡುವ ಮಾರ್ಗದರ್ಶಕರು ಇಲ್ಲದೆ ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದ್ದಾರೆ.. ಇನ್ನು ಕೆಲವರು ಸೂಕ್ತ ವೇದಿಕೆ ಸಿಕ್ಕದೆ ವಂಚನೆಗೆ ಒಳಗಾಗುತ್ತಿದ್ದಾರೆ. ಮತ್ತೆ ಕೆಲವರು ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ತಮ್ಮನ್ನೆ ಮರೆತು ಜೀವನ ಮಾಡುತ್ತಿದ್ದಾರೆ.
ಇದನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಂಡು ಬೆಂಗಳೂರಿನ “ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ” ಯುವ ಘಟಕದವರು, ೪೦ ವರುಷ ಕೆಳಪಟ್ಟ ಯುವಕ ಯುವತಿಯರಿಗಾಗಿ ಮುಂದಿನ ತಿಂಗಳು ಅಕ್ಟೋಬರ್ ೨೯ ರಂದು ಬೆಂಗಳೂರಿನ ಗೌಡ ಸಮಾಜದ ನಮ್ಮನೆ ಸಭಾಂಗಣದಲ್ಲಿ ಯುವತರಂಗ ಎನ್ನುವ ಯುವ ಮೇಳವನ್ನು ಇಟ್ಟುಕೊಂಡಿದ್ದಾರೆ.
ಹತ್ತು ಕುಟುಂಬ ಹದಿನೆಂಟು ಗೋತ್ರದ ಯುವಕರನ್ನ ಒಂದೇ ಮಹಡಿಯಡಿ ಸೇರಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಉದ್ಯೋಗಾನ್ವೇಷಣೆ ಮತ್ತು ಸಮಾಲೋಚನೆ, ವಸ್ತು ಪ್ರದರ್ಶನ, ಪ್ರತಿಭಾ ಪ್ರದರ್ಶನ, ಉದ್ಯಮಶೀಲತೆಯ ಪರಿಚಯ,ಆಹಾರ ಮಳಿಗೆ,ಕೃಷಿ ಸಂಶೋಧನೆ ಮತ್ತು ನಾವೀನ್ಯತೆ, ಮೋಜಿನ ಆಟೋಟಗಳು, ಫ್ಯಾಷನ್ ಶೋ,ಸಾಂಸ್ಕೃತಿಕ ಪ್ರದರ್ಶನ, ರಕ್ತ ದಾನ ಮತ್ತು ಅಂಗ ದಾನ ಪ್ರತಿಜ್ಞೆ ಕ್ಯಾಂಪ್ ಹಾಗೂ ಇನ್ನಿತರೆ ಕಾರ್ಯಕ್ರಮಗಳು.
ಇದರಲ್ಲಿ ಭಾಗವಹಿಸುವ ಇಚ್ಛೆ ಇದ್ದಲ್ಲಿ , ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವ್ಯಕ್ತಿಗಳನ್ನ ಸಂಪರ್ಕಿಸಿ : ಪ್ರಶಾಂತ್ ಅಡ್ಕಾರ್: ೯೮೮೬೮೮೩೦೪೩, ನೇಹ ಪೋರೆಯನ : ೯೮೪೪೩೦೦೩೭೮, ಮಿಥುನ್ ಚೀಯಪನ: ೯೭೩೯೯೦೪೨೪೯, ಚೇತನ್ ಚೆದುಕಾರು: ೯೭೪೦೧೯೬೯೧೬, ದಿಲೀಪ್ ಮೂಲೆಮಜಲು : ೯೭೩೯೩೧೭೮೭೧.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.