ದುಗ್ಗಲಡ್ಕ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

Duggaladka dharmika sabhe copy

ದುಗ್ಗಲಡ್ಕ ಶ್ರೀ ದುರ್ಗಾಲಯ ಯುವ ಸೇವಾ ಸಂಘದ ಆಶ್ರಯದಲ್ಲಿ ೭ನೇ ವರ್ಷದ ಆಯುಧ ಪೂಜೆ ಪ್ರಯುಕ್ತ ಧಾರ್ಮಿಕ ಸಭೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಸೆ. ೩೦ ರಂದು ದುಗಲಡ್ಕದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಎಸ್ ಅಂಗಾರ ವಹಿಸಿದ್ದರು. ರಾಜೇಶ್ ರೈ ಮೇನಾಲ ಧಾರ್ಮಿಕ ಉಪನ್ಯಾಸ ನೀಡಿದರು. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ , ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತಾ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಧರ್ಮಸ್ಥಳ ಗ್ರಾಮ ಯೋಜನೆಯ ವಲಯ ಮೇಲ್ವಿಚಾರಕ ಪುಟ್ಟಣ್ಣ, ಕೆ.ಎಫ್.ಡಿ.ಸಿ. ಅಧೀಕ್ಷಕ ಗಿರಿಧರ ಗೌಡ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೇದಿಕೆಯಲ್ಲಿ ದುಗ್ಗಾಲಯ ದೈವಸ್ಥಾನದ ಮೊಕ್ತೇಸರ ರಾಘವೇಂದ್ರ ಭಟ್, ಅಧ್ಯಕ್ಷ ದಯಾನಂದ ಸಾಲ್ಯಾನ್, ಗೌರವಾಧ್ಯಕ್ಷ ಸುಂದರ್ ರಾವ್, ದುಗ್ಗಾಲಯ ಯುವ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಕಾರ್ಯದರ್ಶಿ ಗೋಪಾಲ ಈಶ್ವರಡ್ಕ ಸ್ವಾಗತಿಸಿ, ಯತೀಶ್ ರೈ ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ದುಗಲಡ್ಕ ಅಂಗನವಾಡಿ ಕೇಂದ್ರ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಸುಸ್ವರ ಆರ್ಕೆಸ್ಟ್ರಾ ಮಂಗಳೂರು ಇವರಿಂದ ಸುಸ್ವರ ಸಂಭ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.