ಅ.3 : ಸುಳ್ಯದಲ್ಲಿ “ಅನನ್ಯ ಕವಿ ಅಡಿಗರು ಒಂದು ನೆನಪು” ಕಾರ್ಯಕ್ರಮ

Suddi logo copy

ಸುಳ್ಯದ ವಾಸವಿ ಸಾಹಿತ್ಯ ಕಲಾ ವೇದಿಕೆ, ಶ್ರೀ ಶಾರದಾ ಮಹಿಳಾ ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಅನನ್ಯ ಕವಿ ಅಡಿಗರು ಒಂದು ನೆನಪು ಕಾರ್ಯಕ್ರಮ ಅ.೩ರಂದು ಸುಳ್ಯದ ಅಮೃತ ಭವನದಲ್ಲಿ ನಡೆಯಲಿದೆ.
ಅಡಿಗರ ನೆನಪು ಕಾರ್ಯಕ್ರಮ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆಯಲಿದೆ.
ಬೆಳಗ್ಗೆ ಗೀತ-ಭಾವ-ಯಾನ ಅಡಿಗರ ಕವಿತೆಗಳೊಂದಿಗೆ, ಬಳಿಕ ಅಡಿಗರ ಕಾವ್ಯಕ್ಕೊಂದು ಪ್ರವೇಶಿಕೆ ಎಸ್.ಆರ್. ವಿಜಯ ಶಂಕರ್ ಇವರಿಂದ. ಬಳಿಕ ಅಡಿಗರ ಬದುಕು ಮತ್ತು ಬರಹ ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ ಇವರಿಂದ, ನಂತರ ಅಡಿಗರ ಕಾವ್ಯದ ವಿಶಿಷ್ಟತೆ ಡಾ| ಎಚ್.ಎಸ್. ರಾಘವೇಂದ್ರ ರಾವ್ ಇವರಿಂದ ಉಪನ್ಯಾಸ ನಡೆಯುವುದು.
ಅಡಿಗರ ಕುರಿತು ಬರೆದ ಭಾವಗೀತೆ ಮತ್ತು ಭಾಷಣ ಸ್ಪರ್ಧೆ ನಡೆದಿದ್ದು ಇದರ ಬಹುಮಾನ ವಿತರಣೆಯು ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ವಾಸವಿ ಕಲಾ ವೇದಿಕೆಯ ಅಧ್ಯಕ್ಷೆ ಡಾ| ವೀಣಾ ಫಾಲಚಂದ್ರ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.