ಗುತ್ತಿಗಾರು : ಪ್ರತಿ ಮನೆಗಳಿಗೂ ಶೌಚಾಲಯ ಕಡ್ಡಾಯ ತಪ್ಪಿದಲ್ಲಿ ಸರಕಾರಿ ಯೋಜನೆ ಕಡಿತ

guthigaru shawchalaya copy

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಚ್ಛ ಭಾರತ್ ಮಿಷನ್‌ನವರು ಶೌಚಾಲಯ ಇಲ್ಲದ ಮನೆಗಳನ್ನು ಗುರುತಿಸಿ, ಸುಮಾರು ೯೦ ಕ್ಕಿಂತಲೂ ಅಧಿಕ ಮನೆಗಳಿಗೆ ಶೌಚಾಲಯ ಇಲ್ಲದಿರುವುದು ಕಂಡು ಬಂದಿದೆ. ನಾಲ್ಕೂರು ಗ್ರಾಮದಲ್ಲಿ ೩೯ ಮನೆಗಳಲ್ಲಿ ಶೌಚಾಲಯ ಇಲ್ಲ. ಈ ಬಗ್ಗೆ ಗುತ್ತಿಗಾರು ಗ್ರಾ.ಪಂ. ವಠಾರದಲ್ಲಿ ಶೌಚಾಲಯ ರಹಿತರ ಸಭೆಯನ್ನು ಸೆ೨೬ ರಂದು ಕರೆಯಲಾಯಿತು. ಸಭಾಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಅಚ್ಯುತ ರವರು ವಹಿಸಿದ್ದರು.
ಪಿಡಿಒ ರವರು ಮಾತನಾಡಿ, ಮುಂದಿನ ಹದಿನೈದು ದಿವಸಗಳೊಳಗೆ ಪ್ರತಿ ಮನೆಯಲ್ಲಿ ಶೌಚಾಲಯ ಹೊಂದಬೇಕು. ತಪ್ಪಿದ್ದಲ್ಲಿ ಈಗಾಗಲೇ ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸು ನೀಡಲು ಪಡಿತರ ಕಡಿತಗೊಳಿಸುವಂತೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಜಿ.ಪಂ. ಸ್ವಚ್ಛ ಭಾರತ್ ಮಿಷನ್ ಅಧಿಕಾರಿಗಳು ಮಾತನಾಡಿ, ಮುಂದಿನ ದಿನ ಸರ್ಕಾರಿ ಯೋಜನೆಗಳು ನಿಮ್ಮ ಕೈ ತಪ್ಪಲಿದೆ ಎಂದರು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.