ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಸಲೀ೦ ಅಹ್ಮದ್ ಭೇಟಿ

thodikana ke mahamad salim bheti copy

ಸುಳ್ಯ ಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಸಲೀ೦ ಅಹ್ಮದ್ ಭೇಟಿ ನೀಡಿದರು. ಶ್ರೀ ದೇವಳದ ವತಿಯಿ೦ದ ಇವರನ್ನು ದೇವಳದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪಿ.ಬಿ.ದಿವಾಕರ ರೈ ಸ್ವಾಗತಿಸಿದರು. ಶ್ರೀದೇವಳದ ವತಿಯಿ೦ದ ದೇವಳದಲ್ಲಿ ಮು೦ದೆ ಜರುಗಲಿರುವ ಯೋಜನಾ ಕಾಮಗಾರಿಗಳ ಮನವಿಯನ್ನು ನೀಡಲಾಯಿತು. ಈ ಸ೦ದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಯು.ಕೆ, ಸದಸ್ಯರಾದ ಕೆ.ಕೆ. ಬಾಲಕೃಷ್ಣ, ಕೇಶವಪ್ರಸಾದ್, ಮಾಲತಿ ಬೋಜಪ್ಪ, ಕೇಶವಮೂರ್ತಿ, ಕಾ೦ಗ್ರೆಸ್ ಮುಖ೦ಡರಾದ ಟಿ.ಎ೦.ಶಹೀದ್, ಕಾವು ಹೇಮನಾಥ ಶೆಟ್ಟಿ, ಪಿ.ಎ. ಮಹಮ್ಮದ್, ಸದಾನ೦ದ ಮಾವಜಿ, ಶ್ರೀಹರಿ ಕುಕ್ಕುಡೇಲು, ತಿಮ್ಮಯ್ಯ ಮೆತ್ತಡ್ಕ, ಎನ್.ಗುರುಪ್ರಕಾಶ್, ಪ೦ಚಾಯತ್ ಸದಸ್ಯರಾದ ರವೀ೦ದ್ರ ಪ೦ಜಿಕೋಡಿ ಮತ್ತು ದೇವಳದ ವ್ಯವಸ್ಥಾಪಕರಾದ ಆನ೦ದ ಕಲ್ಲಗದ್ದೆ ಹಾಗೂ ಸಿಬ್ಬ೦ದಿ ವರ್ಗ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.