ಐವರ್ನಾಡು ಯಕ್ಷಗಾನ ಪ್ರದರ್ಶನದಲ್ಲಿ ದೇವರ ಅವಹೇಳನ: ವಿಶ್ವ ಹಿಂದೂ ಪರಷತ್, ಭಜರಂಗದಳ ಖಂಡನೆ

Ivernadu Yakshaganadalli Devara Avahelala Press Meet
ಐವರ್ನಾಡಿನಲ್ಲಿ ನಡೆದ ಶಾರದೋತ್ಸವದ ಸಂದರ್ಭದಲ್ಲಿ ನಡೆದ ಯಕ್ಷಗಾನದಲ್ಲಿ ಹಿಂದೂ ದೇವರುಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಖಂಡಿಸಿದೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿಯವರು ಐವರ್ನಾಡಿನಲ್ಲಿ ಯುವಶಕ್ತಿ ನೇತೃತ್ವದಲ್ಲಿ ಶಾರದಾ ಪೂಜೆ ನಡೆದಿದೆ. ಅದಕ್ಕೆ ನಮ್ಮ ವಿರೋಧವಲ್ಲ. ಆದರೆ ಅಂದು ರಾತ್ರಿ ನಡೆಸಿದ ಯಕ್ಷಗಾನದ ಪ್ರದರ್ಶನವೊಂದರಲ್ಲಿ ದೇವರಿಗೆ ಅಪಮಾನವಾಗುವಂತೆ ಚಿತ್ರಿಸಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಭಜರಂಗದಳ ಗೋರಕ್ಷಾ ಪ್ರಮುಖ್, ಲತೀಶ್ ಗುಂಡ್ಯ ಮಾತನಾಡಿ ರಾಜ್ಯದ ಸಚಿವ ಕಾಗೋಡು ತಿಮ್ಮಪ್ಪರವರು ಇತ್ತೀಚೆಗೆ ಗೋಮಾಂಸ ಮತ್ತು ಹಂದಿಮಾಂಸ ಒಂದೇ ಎಂಬ ಅರ್ಥದಲ್ಲಿ ಮಾತನಾಡಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕಾಗೋಡು ತಿಮ್ಮಪ್ಪರವರಿಗೆ ತಾಕತ್ತಿದ್ದರೆ ಗೋರಕ್ಷಕರು ಮತ್ತು ಗೋಭಕ್ತರ ಓಟು ಬೇಡ ಎಂಬ ಹೇಳಿಕೆ ನೀಡಲಿ ಎಂದು ಹೇಳಿದರು. ಅವರು ತಮ್ಮ ಹೇಳಿಕೆಗೆ ಕ್ಷಮಾಯಾಚನೆ ಮಾಡದಿದ್ದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು. ಭಜರಂಗದಳ ಸಂಚಾಲಕ ರಾಜೇಶ್ ರೈ, ನಗರ ಸಂಚಾಲಕ ಹರಿಪ್ರಸಾದ್ ಗೂಮಡ್ಯ, ವಿಶ್ವ ಹಿಂದೂ ಪರಿಷತ್ ಜತೆ ಕಾರ್ಯದರ್ಶಿ ಪ್ರಶಾಂತ್ ಕಾಯರ್ತೋಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.