ವಕ್ಫ್ ಸಚಿವ ತನ್ವಿರ್ ಸೇಠ್ ರಿಂದ ಅನ್ಸಾರ್ ಮನೆ ಮನೆ ಸಮೀಕ್ಷೆಗೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

ansar jamaath samikshe 2 copy

ಧಾರ್ಮಿಕ ಕೇಂದ್ರಗಳಾದ ಮಸೀದಿ ಮದ್ರಸ ಇನ್ನೀತರ ಸಾಮಾಜಿಕ ಸೇವಾ ಸಂಘ ಸಂಸ್ಥೆಗಳು ಕೇವಲ ಧಾರ್ಮಿಕ ವಿಚಾರಗಳಿಗೆ ಮಾತ್ರ ಸೀಮಿತವಾಗದೆ, ಸಾಮರಸ್ಯ, ಸಹಬಾಳ್ವೆ ಸಂದೇಶ ನೀಡುವ ಕೇಂದ್ರಗಳಾಗಬೇಕು. ಅಲ್ಲದೆ ಬಡ ಜನರಿಗೆ ಶಿಕ್ಷಣ ಆರೋಗ್ಯ ವಿವಾಹ ಮನೆ ನಿರ್ಮಾಣ ಮೊದಲಾದ ಕ್ಷೇತ್ರಗಳಲ್ಲಿ ತನ್ನ ಸ್ವಂತ ನಿಧಿಯಿಂದ ದಾನಿಗಳಿಂದ ಸಂಗ್ರಹಿಸಿ ಕಿಂಚಿತ್ತು ನೀಡುವ ಮತ್ತು ಸರಕಾರದ ಸವಲತ್ತುಗಳನ್ನು ಬಡ ಜನರಿಗೆ ತಲುಪಿಸುವು ಮಾಹಿತಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಆಧುನಿಕ ಯುಗದಲ್ಲಿ ಇದು ಅನಿವಾರ್ಯವಾಗಿದೆ. ಅನ್ಸಾರ್ ಸುವರ್ಣ ಸಂಭ್ರಮದ ಅಂಗವಾಗಿ ನಡೆಸುವ ಮನೆ ಮನೆ ಸಮೀಕ್ಷೆ ಕಾರ್ಯ ಶ್ಲಾಘನೀಯ ಎಂದರು.

ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಸುವರ್ಣ ಸಂಭ್ರಮದ ಅಂಗವಾಗಿ ಇ ಜಮಾಯತ್ ಸಮೀಕ್ಷೆ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ವಕ್ಪ್ ಸಚಿವರಾದ ತನ್ವಿರ್ ಸೇಠ್ ಚಾಲನೆ ನೀಡಿದರು. ಗಾಂಧಿನಗರ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ದು:ವಾ ನೆರವೇರಿಸಿದರು. ಅನ್ಸಾರ್ ಅಧ್ಯ್ಯಕ್ಷ ಕೆ.ಎಂ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕ್ಪ್ ಕೌನ್ಸಿಲ್ ಸದಸ್ಯ ಎಸ್.ಸಂಶುದ್ದೀನ್, ಎ.ಪಿ.ಎಂ.ಸಿ ಸದಸ್ಯ ಆದಂ ಹಾಜಿ ಕಮ್ಮಾಡಿ, ಸುಳ್ಯ ವರ್ತಕರ ಸಂಘದ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕಾರ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್ ಶಹೀದ್, ಅನ್ಸಾರಿಯಾ ಅದ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ಹಾಜಿ ಐ ಇಸ್ಮಾಯಿಲ್, ಮಾಜಿ ಅಧ್ಯಕ್ಷರಾದ ಹಾಜಿ ಬುಶ್ರಾ ಮಹಮ್ಮದ್, ಸಮೀಕ್ಷೆ ಉಪ ಸಮಿತಿ ಮೊಯದೀನ್ ಫ್ಯಾನ್ಸಿ, ಸಂಚಾಲಕ ಮಜೀದ್ ಕೆ.ಡಿ, ಶಾಫಿ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ಅನ್ಸಾರಿಯಾಕ್ಕೆ ಭೇಟಿ
ಈ ಸಂದರ್ಭದಲ್ಲಿ ಸುಳ್ಯ ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.