ಕೊಲ್ಲಮೊಗ್ರು-ಹರಿಹರ ಸೊಸೈಟಿ ವಾರ್ಷಿಕ ಮಹಾಸಭೆ

harihara society copy

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.೨೩ ರಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇಲ್ಲಿ ಸಂಘದ ಅಧ್ಯಕ್ಷ ಹರ್ಷಕುಮಾರ್ ಡಿ.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ವಾರ್ಷಿಕ ೨೨,೨೩,೫೮೩ ರುಪಾಯಿ ಲಾಭಾಂಶ ದಾಖಲಿಸಿದ್ದು ಶೇ ೫ ಡಿವಿಡೆಂಟ್ ಘೋಷಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿನೂಪ್ ಮಲ್ಲಾರ, ನಿರ್ದೇಶಕರುಗಳಾದ ಗಿರೀಶ್ ಕೆ.ಎಸ್, ಗಣೇಶ್ ಕೆ.ಎಸ್, ಶೇಖರ ಅಂಬೆಕಲ್ಲು, ಮಣಿಕಂಠ ಕೊಳಗೆ, ಉಷಾ ಪ್ರಭಾಕರ ಕಿರಿಭಾಗ, ವಿಜಯ ಕೆ.ಎಸ್, ಬೊಳಿಯ ಬೆಂಡೋಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ ಕೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಉಪಸ್ಥಿತರಿದ್ದರು. ಜಿನಸು ವ್ಯಪಾರದಲ್ಲಿ ಹೆಚ್ಚಿನ ಲಾಭಾಂಶ ಗಳಿಸುವಂತೆ, ಜಿನಸು ವಿಭಾಗ ಬೆಳಗ್ಗೆ ೯.೩೦ಕ್ಕೆ ಸರಿಯಾಗಿ ಕಾರ್ಯಾರಂಬ ಮಾಡುವಂತೆ, ರಸಾಯನಿಕ ಗೊಬ್ಬರವನ್ನು ಚಿಲ್ಲರೆಯಾಗಿ ನೀಡುವಂತೆ, ಒಬ್ಬ ವ್ಯಕ್ತಿಗೆ ಈಗ ಇರುವ ಮಿತಿ ೩೦ ಲಕ್ಷವನ್ನು ಹೆಚ್ಚು ಮಾಡುವಂತೆ ಸಲಹೆಗಳು ಬಂದವು. ದುರ್ಗಾದಾಸ್ ಮಲ್ಲಾರ, ಬಿ.ಸಿ ವಸಂತ್, ಕೆ.ಪಿ ಗಿರಿಧರ, ಚಂದ್ರ ಶೇಖರ ಕೊಂದಾಳ, ದಯಾನಂದ ಕಟ್ಟೆಮನೆ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಅಧ್ಯಕ್ಷತೆಯಿಂದ ಮಾತನಾಡಿದ ಹರ್ಷಕುಮಾರ್ ಅವರು ಸಂಸ್ಥೆಯ ಜವುಳಿ ವ್ಯಾಪಾರ ನಷ್ಟದಲ್ಲಿದ್ದ ಕಾರಣ ಸ್ಥಗಿತ ಗೊಳೀಸುವುದಾಗಿ, ಸಾಲಮನ್ನಾದ ಬಗ್ಗೆ ವಿವರಿಸುತ್ತಾ ನಮ್ಮಲ್ಲಿ ಸಾಲಾ ಮನ್ನಾ ಯೋಜನೆ ಹೆಚ್ಚಿನ ಜನರಿಗೆ ಲಭಿಸುವಂತೆ ಗಮನ ಹರಿಸಲಾಗಿದೆ, ಕೊಲ್ಲಮೊಗ್ರು ಶಾಖೆಗೆ ಜಾಗದ ಕೊರತೆಯಿದೆ ಎಂದರು. ಮೆನೆಜರ್ ಸ್ವಾಗತಿಸಿ, ವಂದಿಸಿದರು. ಅನಂತರಾಮ ಮಣಿಯಾನ ವರದಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.