ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರಿಗೆ ಹೃದಯ ಶಸ್ತ್ರಚಿಕಿತ್ಸೆ – ಪಂಜ , ನಾಗಪಟ್ಟಣ ದೇಗುಲಗಳಲ್ಲಿ ವಿಶೇಷ ಪೂಜೆ

panja chikisthsege prathraathane copy

ರಾಜ್ಯದ ಮಾಜಿ ಮುಖ್ಯ ಮಂತ್ರಿ, ಜೆಡಿಎಸ್ ರಾಜ್ಯ ಅಧ್ಯಕ್ಷ ಹೆಚ್.ಡಿ. ಕುಮಾರ ಸ್ವಾಮಿಯವರು ಹೃದಯ ಶಸ್ತ್ರಚಿಕಿತ್ಸೆ ಗೆ ಒಳಗಾಗುವ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ, ಶೀಘ್ರ ಗುಣಮುಖರಾಗಲಿ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ನಾಯಕರು ಹಾರೈಸಿದ್ದಾರೆ.

ಪಂಜದ ನಾಯಕರುಗಳ ಉಪಸ್ಥಿತಿಯಲ್ಲಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಜಾಕೆ ಮಾಧವ ಗೌಡ, ತಾಲ್ಲೂಕು ಜನತಾದಳದ ಉಪಾಧ್ಯಕ್ಷರಾದ ದಾಮೋದರ ನಾರ್ಕೋಡು , ತಾಲ್ಲೂಕು ಯುವ ಜನತಾದಳದ ಅಧ್ಯಕ್ಷ ಜೀವನ್ ನಾರ್ಕೋಡು ಅವರ ಮುಂದಾಳತ್ವದಲ್ಲಿ ಸುಳ್ಯ ತಾಲ್ಲೂಕಿನ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ನಾಗಪಟ್ಟಣ ಸದಾಶಿವ ದೇವಸ್ಥಾನ, ನಾವೂರು ಕಲ್ಕುಡ ದೇವಸ್ಥಾನಗಳಲ್ಲಿ ಪ್ರಾರ್ಥನೆಯನ್ನು ಮಾಡಲಾಯಿತು. ಜಿಲ್ಲಾ ಯುವ ಜನತಾದಳದ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ, ಜಿಲ್ಲಾ ಯುವ ಜನತಾದಳದ ಸಂಘಟನಾ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್ಲು , ತಾಲ್ಲೂಕು ಜನತಾದಳ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ತಾಲ್ಲೂಕು ಯುವ ಜನತಾದಳ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಏನೆಕಲ್ಲು, ತಾಲ್ಲೂಕು ಜನತಾದಳದ ರಾಮಚಂದ್ರ ಗೌಡ, ಸುರೇಶ್ ನಡ್ಕ, ಗಣೇಶ್ ಭೀಮಗುಳಿ, ಚಂದ್ರಶೇಖರ ಪಲ್ಲತಡ್ಕ, ರೋಹನ್ ಪೀಟರ್, ಸುನೀಲ್ ಕಾಂತಮಂಗಲ, ಬಾಲಕೃಷ್ಣ ಗೌಡ ಮೂಲೆಮನೆ ಮೊದಲಾದವರು ಭಾಗವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.