ಐವರ್ನಾಡು ಗ್ರಾ.ಪಂ. ಪಿ.ಡಿ.ಒ. ವರ್ಗಾವಣೆ ವಿರುದ್ಧ ಪ್ರತಿಭಟನೆ

ivernadu prathibatane 3 copy

ಐವರ್ನಾಡು ಗ್ರಾ.ಪಂ. ಪಿ.ಡಿ.ಒ. ಯು.ಡಿ. ಶೇಖರ್ ರವರನ್ನು ವರ್ಗಾವಣೆಗೊಳಿಸಿದ ಕ್ರಮದ ವಿರುದ್ಧ ಐವರ್ನಾಡಿನ ಜನಪ್ರತಿನಿಧಿಗಳು ಸೇರಿದಂತೆ ಹಲವರು ಸುಳ್ಯ ತಾಲೂಕು ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ ರವರು ಪಿ.ಡಿ.ಒ. ಯು.ಡಿ. ಶೇಖರ್ ರವರನ್ನು ರಾಜಕೀಯ ಒತ್ತಡದ ಕಾರಣದಿಂದ ವರ್ಗಾಯಿಸಲಾಗಿದೆ. ಐವರ್ನಾಡು ಗ್ರಾ.ಪಂ. ಈ ಬಾರಿ ಗಾಂಧಿ ಪುರಸ್ಕಾರ ದೊರೆತ್ತಿದ್ದು, ಇದಕ್ಕೆ ಪ್ರಮುಖ ಕಾರಣಕರ್ತರು ಯು.ಡಿ. ಶೇಖರ್ ಅವರನ್ನು ಅಕಾಲಿಕವಾಗಿ ವರ್ಗಾಯಿಸುವ ಮೂಲಕ ಗಾಂಧೀಜಿಗೆ ದ್ರೋಹ ಮಾಡಿದಂತಾಗಿದೆ ಎಂದು ಹೇಳಿದರು. ಪ್ರತಿಭಟನಾಕಾರರು ಜಿಲ್ಲಾ ಪಂಚಾಯತ್ ಸಿ.ಎಸ್. ಮತ್ತು ತಾ.ಪಂ. ಇ.ಒ. ವಿರುದ್ದ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರಲ್ಲಿ ವಿಷಯ ಪ್ರಸ್ತಾಪಿಸಿದರು. ಕಾನೂನು ಬಾಹಿರವಾಗಿ ಈ ರೀತಿ ವರ್ಗಾಯಿಸಿರುವುದಕ್ಕೆ ಸಿ.ಎಸ್. ಧೋರಣೆಯೇ ಕಾರಣ. ಯು.ಡಿ. ಶೇಖರ್ ರವರನ್ನು ಅವರ ಸ್ಥಾನದಿಂದ ವರ್ಗಾಯಿಸದಂತೆ ಸೂಚಿಸುವುದಾಗಿ ಅವರು ಭರವಸೆ ನೀಡಿದರು. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಐವರ್ನಾಡು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಪರ್ಲಿಕಜೆ, ಉಪಾಧ್ಯಕ್ಷ ಶಾಂತರಾಮ ಕಣಿಲೆಗುಂಡಿ, ಸತೀಶ್ ಎಡಮಲೆ, ಕುಸುಮಾಧರ ಮಡ್ತಿಲ, ಚೈತ್ರಾ ಬಿರ್ಮುಕಜೆ, ಜಯಪ್ರಕಾಶ್ ಕಜೆತ್ತಡ್ಕ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.