ಸುಳ್ಯದಲ್ಲಿ ದಿ ಪ್ರಿಂಟ್ ಶಾಪ್ ಶುಭಾರಂಭ

Suddi logo copy

ಸುಳ್ಯ ಅಂಬಟೆಡ್ಕದಲ್ಲಿರುವ ಅಕ್ಷಯ ಆರ್ಕೇಡ್‌ನಲ್ಲಿ ಚಂದ್ರಕಿರಣ್ ಭಟ್ ಪೆರ್ಲ ಮತ್ತು ಪ್ರಶಾಂತ್ ಶೇಣಿ ಮಾಲಕತ್ವದ ದಿ ಪ್ರಿಂಟ್ ಶಾಪ್ ಸೆ.21ರಂದು ಶುಭಾರಂಭಗೊಂಡಿತು.
ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ| ಡಿ.ವಿ.ಲೀಲಾಧರರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿದ ಅವರು, ’ಸುಳ್ಯದಲ್ಲಿ ಪ್ರಥಮ ಬಾರಿಗೆ ಇಂತಹ ಪ್ರಿಂಟಿಂಗ್ ಶಾಪ್ ಶುಭಾರಂಭಗೊಂಡಿದ್ದು ನಗರದ ಅಭಿವೃದ್ಧಿಗೆ ಪೂರಕವಾಗಿರುತ್ತದೆ’ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ಸುಳ್ಯ ಫೊಟೋಗ್ರಾಫರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಕರುಣಾಕರ ಎಣ್ಣೆಮಜಲು, ನಗರ ಪಂಚಾಯತ್ ಸದಸ್ಯ ಕೆ.ಎಂ. ಮುಸ್ತಫಾ, ಕೆನರಾ ಬ್ಯಾಂಕ್ ಶಾಖಾಧಿಕಾರಿ ಶ್ರೀಮತಿ ಲಲಿತಾ ನಾಗರಾಜನ್, ಅಕ್ಷಯ ಆರ್ಕೇಡ್‌ನ ಮಾಲಕರಾದ ಶಿವಪ್ರಸಾದ್ ಸೋಮಯಾಗಿ, ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಪ್ರಗತಿಪರ ಕೃಷಿಕರಾದ ಜನಾರ್ಧನ ಗೌಡ ಶೇಣಿ, ಶ್ರೀಮತಿ ಸಾವಿತ್ರಿ ಭಟ್‌ರವರು ದೀಪಬೆಳಗಿಸಿ ಶುಭಹಾರೈಸಿದರು. ಕಿರಣ್ ಭಟ್ ಸ್ವಾಗತಿಸಿದರು, ಪ್ರಶಾಂತ್ ಶೇಣಿ ವಂದಿಸಿದರು, ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದಿ ಪ್ರಿಂಟ್ ಶಾಪ್‌ನಲ್ಲಿ ಮಗ್ ಪ್ರಿಂಟಿಂಗ್, ಟಿ ಶರ್ಟ್ ಪ್ರಿಂಟಿಂಗ್, ಮೊಬೈಲ್ ಕವರ್ ಪ್ರಿಂಟಿಂಗ್, ಬುಸಿನೆಸ್ ಲೋಗೋ, ಪ್ರೊಫೆಶನಲ್ ಫೊಟೋಗ್ರಫಿ, ಪ್ರೊಫೆಶನಲ್ ವೀಡಿಯೋಗ್ರಫಿ, ವೀಡಿಯೋ ಮತ್ತು ಫೋಟೋ ಎಡಿಟಿಂಗ್, ಕಮರ್ಷಿಯಲ್ ಜಾಹೀರಾತು, ಡಿಸೈನ್ ವರ್ಕ್ಸ್, ಪ್ರೋಮೋ ಮೇಕಿಂಗ್, ಪ್ರೊಫೆಶನಲ್ ವಾಯ್ಸ್ ಒವರ್ ಸರ್ವಿಸಸ್, ಡಾಕ್ಯೂಮೆಂಟರಿ ಮತ್ತು ಕಿರು ಚಿತ್ರ ಎಡಿಟಿಂಗ್ ಮತ್ತು ಎಲ್ಲಾ ರೀತಿಯ ಆಕರ್ಷಕ ಆರ್ಟ್ ವರ್ಕ್ಸ್, ಫೋಟೋ ಫ್ರೆಮ್ಸ್ ಮತ್ತು ಲ್ಯಾಮಿನೇಶನ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.