ದ.ಕ. ಕೊಡಗು: ದಸರಾ ರಜೆ ಸೆ. 21ರಿಂದ ಅ.5ರವರೆಗೆ

Suddi logo copy

ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ದಸರಾ ರಜೆಯನ್ನು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 5 ರವರೆಗೆ ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅ.6 ರಂದು ಶಾಲಾ ಕಾಲೇಜುಗಳು ಪುನರಾರಂಭಗೊಳ್ಳಲಿದೆ.
ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾಸಂಸ್ಥೆಗಳಿಗೆ ಈ ರಜೆ ಅನ್ವಯಿಸುತ್ತದೆ. ದಸರಾ ರಜೆಯನ್ನು ನವರಾತ್ರಿ ಸಂದರ್ಭದಲ್ಲಿಯೇ ನೀಡುವಂತೆ ಸಾವ೯ಜನಿಕರ, ಶಿಕ್ಷಣ ಸಂಸ್ಥೆಗಳ ಮನವಿಗೆ ಸ್ಪಂದಿಸಿ ರಾಜ್ಯ ಸರಕಾರ ದಸರಾ ರಜೆ ಬದಲಾಯಿಸಿದೆ ಎಂದು ಅರಣ್ಯ, ದ.ಕ. ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.