ಸುಳ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ

Advt_NewsUnder_1
Advt_NewsUnder_1
Advt_NewsUnder_1

JDS sabhe copy

ಸುಳ್ಯ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯು ಪಕ್ಷದ ತಾಲೂಕು ಅಧ್ಯಕ್ಷ ದಯಾಕರ ಆಳ್ವರವರ ಅಧ್ಯಕ್ಷತೆಯಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಿತು.
ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ಜೆಡಿಎಸ್ ಜಂಟಿ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ಯುವ ಜೆಡಿಎಸ್ ಅಧ್ಯಕ್ಷ ಜೀವನ್ ನಾರ್ಕೋಡು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಪ್ರೇಮಾನಂದ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಯಾನಂದ ಕೊಯಿಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಕ್ಷ ಸಂಘನೆ ಬಗ್ಗೆ ಮುಂದಿನ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ನಡೆಯಿತು. ಅಭ್ಯರ್ಥಿ ಆಕಾಂಕ್ಷಿಗಳು ಪಕ್ಷ ಸಂಘಟಣೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಸಲಹೆ ಕಾರ್ಯಕರ್ತರಿಂದ ಬಂತು. ಮೊದಲು ಜನರ ಪ್ರೀತಿ ಗಳಿಸಿಕೊಳ್ಳಿ ಆ ಬಳಿಕ ಅಭ್ಯರ್ಥಿಗಳಾಗಿ ಎಂದು ಜಾಕೆ ಮಾಧವ ಗೌಡ ಹೇಳಿದರು. ಪ್ರವೀಣ್ ಮುಂಡೋಡಿ, ಸುಕುಮಾರ್ ಕೋಡ್ತುಗುಳಿ, ಸೋಮಸುಂದರ ಕೋಟೆ, ರಾಮಚಂದ್ರ ಬಳ್ಳಡ್ಕ, ಡಾ. ಮೋಹನ್ ಕುಆಂರ್, ದಾಮೋದರ ನಾರ್ಕೋಡು, ನಾರಾಯಣ ಅಗ್ರಹಾರ, ಶ್ರೀಮತಿ ಸಾಹಿತ್ಯ ಮುಂಡೋಡಿ ಮೊದಲಾದವರು ಸಲಹೆ ಸೂಚನೆಗಳನ್ನಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.