ತುಳುನಾಡು ರಕ್ಷಣಾ ವೇದಿಕೆಯಿಂದ ನಗರಪಂಚಾಯತ್‌ಗೆ ಮನವಿ

ಕಲ್ಲುಮುಟ್ಲು ಪರಿವಾರಕಾನ ರಸ್ತೆಯ ದುರಸ್ಥಿಗಾಗಿ ಸುಳ್ಯ ತುಳುನಾಡು ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಯವರಿಗೆ ಮನವಿಯನ್ನು ಸೆ.19 ರಂದು ನ.ಪಂ. ವಠಾರದಲ್ಲಿ ನೀಡಲಾಯಿತು.
ಕಲ್ಲುಮುಟ್ಲು 14ನೇ ವಾರ್ಡಿನ ಪರಿವಾರಕಾನ ಭಾಗದ ರಸ್ತೆಯು ತೀವ್ರ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಯಾವುದೇ ಖಾಸಗಿ ವಾಹನಗಳು ಬಾಡಿಗೆಗೆ ಬರಲು ನಿರಾಕರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಸುಮಾರು ೬೫ ಮನೆಗಳಿದ್ದು, ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿದೆ. ಈ ರಸ್ತೆಯ ದುರಸ್ಥಿ ಬಗ್ಗೆ ಸಾರ್ವಜನಿಕರು ಸೇರಿ ಶ್ರೀಮತಿ ರೇವತಿ ರವೀಂದ್ರ ರವರ ನೇತೃತ್ವದಲ್ಲಿ ತುಳುನಾಡು ರಕ್ಷಣಾ ವೇದಿಕೆಗೆ ಮನವಿ ನೀಡಿದರು.
ಇದಕ್ಕೆ ಸ್ಪಂದಿಸಿದ ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರು ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿಗೆ ಮನವಿಯನ್ನು ನೀಡಿದರು. ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವರವರು ಮಳೆಗಾಲವಾದ್ದರಿಂದ ತಾತ್ಕಾಲಿಕ ಪರಿಹಾರವನ್ನು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸುಳ್ಯ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ್ ರೈ ಮರುವಂಜ, ಸುಳ್ಯ ತುಳುನಾಡು ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ರಂಜಿತ್ ಪೂಜಾರಿ, ಕಾರ್ಯದರ್ಶಿ ಕಾರ್ತಿಕ್ ರೈ ಕನ್ನೆಜಾಲು, ಖಜಾಂಚಿ ರಂಜಿತ್ ಜಯನಗರ, ಸ್ಥಳೀಯರಾದ ಸೇಸಪ್ಪ ನಾಯ್ಕ ಪರಿವಾರಕಾನ, ಅರುಣ್ ಕುಮಾರ್ ಕೇರ್ಪಳ, ಅಶೀಕ್ ರೈ, ಚಿತ್ತರಂಜನ್ ಮರ್ಕಂಜ, ಭರತ್ ನಾಯ್ಕ ಸಂಪಾಜೆ, ರೋಹಿತ್, ಅನಂತ್ ಬುಡು, ಚರಣ್ ಕೇರ್ಪಳ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.