ಸಾರ್ವಜನಿಕರಿಗೆ ನ.ಪಂ. ಸೂಚನೆ

Suddi logo copy

ನ.ಪಂ. ವ್ಯಾಪ್ತಿಯ ಸಾರ್ವಜನಿಕರು ಪಂಚಾಯತ್‌ಗೆ ಪಾವತಿಸಲು ಬಾಕಿ ಇರುವ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ ಶುಲ್ಕ ಮತ್ತು ಸ್ಟಾಲ್ ಬಾಡಿಗೆಯನ್ನು ಸೆ.೩೦ ಒಳಗೆ ಪಾವತಿಸಬೇಕು. ೨೦೧೭-೧೮ನೇ ಸಾಲಿನ ಕಟ್ಟಡ ತೆರಿಗೆಯನ್ನು ಚಲನ್ ಭರ್ತಿ ಮಾಡಿ ಸಂಬಂಧಪಟ್ಟ ಬ್ಯಾಂಕ್‌ಗೆ ಪಾವತಿಸಬೇಕು. ೨೦೧೭-೧೮ನೇ ಸಾಲಿನ ಕಟ್ಟಡ ತೆರಿಗೆ ಜೂನ್ ತಿಂಗಳಿನಿಂದ ಪ್ರತೀ ತಿಂಗಳು ಶೇ.೨ ಬಡ್ಡಿ ಸಹಿತ ಪಾವತಿಸತಕ್ಕದ್ದು. ನೀರಿನ ಶುಲ್ಕ ಪಾವತಿಸಲು ಬಾಕಿ ಇದ್ದಲ್ಲಿ ಸೆ.೨೧ರ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ಯಾವುದೇ ಸೂಚನೆ ನೀಡದೆ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಕಟ್ಟಡ ತೆರಿಗೆ, ನೀರಿನ ಶುಲ್ಕ ಹಾಗೂ ಇನ್ನಿತರ ಬಾಕಿಗಳನ್ನು ನಿಗಧಿ ಪಡಿಸಿದ ಅವಧಿಯೊಳಗೆ ಪಾವತಿಸಲು ತಿಳಿಸಲಾಗಿದೆ. ಉದ್ದಿಮೆ ಪರವಾನಿಗೆ ನವೀಕರಿಸಲು ಬಾಕಿ ಇದ್ದಲ್ಲಿ ಕೂಡಲೇ ನವೀಕರಿಸುವುದು. ನ.ಪಂ. ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಪಟ್ಟಣ ಪಂಚಾಯತ್‌ನಿಂದ ಪೂರ್ವಾನುಮತಿ ಪಡೆದು ಅಳವಡಿಸತಕ್ಕದ್ದು. ಹಾಗೂ ನವೀಕರಿಸಲು ಬಾಕಿ ಇದ್ದಲ್ಲಿ ಕೂಡಲೇ ನವೀಕರಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ನ.ಪಂ.ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.