ಸೆ.22 : ಬೆಳ್ಳಾರೆಯಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ

Suddi logo copy

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ ಉಜಿರೆಯ ಸಹಯೋಗದೊಂದಿಗೆ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಸೆ.೨೨ರಂದು ಅಪರಾಹ್ನ ೨.೦೦ ಗಂಟೆಗೆ ನಡೆಯಲಿದೆ. ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜಿತ್ ಕೆ ರಾಜಣ್ಣವರ್ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವ ಉದ್ಯೋಗ ಮಾಹಿತಿ ನೀಡಲಿದ್ದಾರೆ. ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್‌ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ತರಬೇತಿಗಳಲ್ಲಿ ಭಾಗವಹಿಸಲಿಚ್ಚಿಸುವ ೧೮ ರಿಂದ ೪೫ ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಈ ಮಾಹಿತಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಪ್ರಕಟನೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.