ಸಚಿವ ರಮಾನಾಥ ರೈಯವರಿಂದ ಸಂಧಾನ ಸಭೆ ಸುಳ್ಯ ಕಾಂಗ್ರೆಸ್ಸಿನ ಒಳಗಿನ ಕದನಕ್ಕೆ ವಿರಾಮ

Suddi logo copy

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾ ವಣೆ ಮತ್ತು ನೇಮಕದ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್‌ನೊಳಗೆ ಹುಟ್ಟಿಕೊಂಡಿರುವ ಅಸಮಾಧಾನವನ್ನು ತಣಿಸಲು ಸಚಿವ ಬಿ.ರಮಾನಾಥ ರೈ ಮುಂದಾಗಿದ್ದಾರೆ. ಸುಳ್ಯ ಕಾಂಗ್ರೆಸ್‌ನ ಎರಡು ಬಣಗಳನ್ನು ಬಂಟ್ವಾಳಕ್ಕೆ ಕರೆದು ಸೆ.೧೪ರಂದು ಅವರು ಸಂಧಾನ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಎಂ ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಪಿ.ಸಿ. ಜಯರಾಮ, ಸೋಮಶೇಖರ ಕೊಯಿಂಗಾಜೆ, ಪಿ ಎಸ್ ಗಂಗಾಧರ್, ಸುರೇಶ್ ಅಮೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ದಿವ್ಯಪ್ರಭಾ ಚಿಲ್ತಡ್ಕ, ಸಂಶುದ್ದೀನ್, ಎಂ ಮಾಧವ ಗೌಡ, ಪರಶುರಾಮ ಚಿಲ್ತಡ್ಕ, ಸಿದ್ದಿ ಕೊಕ್ಕೊ, ಶಾಫಿ ಕುತ್ತಮೊಟ್ಟೆ, ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ, ಮಹೇಶ್ ಕರಿಕ್ಕಳ, ದಿನೇಶ್, ಜಯಪ್ರಕಾಶ್ ನೆಕ್ರೆಪ್ಪಾಡಿ, ಕಿರಣ್ ಬುಡ್ಲೆಗುತ್ತು, ಫವಾಜ್ ಕನಕ ಮಜಲು, ತೇಜಕುಮಾರ್ ಬಡ್ಡಡ್ಕ, ಕೆ.ಕೆ.ಹರಿಪ್ರಸಾದ್, ಸುನಿಲ್ ರೈ ಪೆರುವಾಜೆ, ಲಕ್ಷ್ಮಣ ಶೆಣೈ, ಸತ್ಯಕುಮಾರ್ ಆಡಿಂಜ, ಅನಿಲ್ ರೈ ಬೆಳ್ಳಾರೆ, ಸುಧೀರ್ ರೈ ಮೇನಾಲ,
ಶಾಫಿ ಕುತ್ತಮೊಟ್ಟೆ ಮೊದಲಾದವರು ಭಾಗವಹಿಸಿದ್ದರು.
ಸುಳ್ಯ ಕಾಂಗ್ರೆಸ್‌ನ ಗೌಡ ಸಮಾಜದ ಪ್ರಮುಖರಿಗೆ ಕೆ.ಪಿ.ಸಿ.ಸಿ. ಪದಾ ಧಿಕಾರ, ಡಿ.ಸಿ.ಸಿ. ಪದಾಧಿಕಾರ, ಅಕಾಡೆಮಿಯ ಅಧ್ಯಕ್ಷತೆ ಕೊಡಲು ಕ್ರಮ ಕೈಗೊ ಳ್ಳುವುದಾಗಿಯೂ, ಪಕ್ಷದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿ ಚುನಾವಣೆ ಎದುರಿಸಲು ಸಿದ್ಧಗೊಳಿಸಬೇಕಾಗಿಯೂ, ಸಚಿವ ರಮಾನಾಥ ರೈಯವರು ಸೂಚನೆ ನೀಡಿದರು. ಆ ಸಂದರ್ಭ ಅಸಮಾಧಾನಿತ ಗೌಡ ಕಾಂಗ್ರೆಸ್ ನಾಯಕರು ತಮ್ಮ ಬೇಡಿಕೆಗಳು ಈಡೇರಿದ ಬಳಿಕ ಸಂಘಟನೆಯ ಕಾರ್ಯ ಕೈಗೊಳ್ಳುವುದಾಗಿ ಹೇಳಿದರೆನ್ನಲಾಗಿದೆ.
ಬೇಡಿಕೆ ಈಡೇರಿಸುವ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿಯೂ ಪಕ್ಷದ ಸಭೆಗಳು ಮತ್ತು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ರಮಾನಾಥ ರೈಯವರು ಹೇಳಿದರೆನ್ನಲಾಗಿದೆ. ಆ ಮಾತಿಗೆ ಒಪ್ಪಿದ ಅಸಮಾಧಾನಿತ ನಾಯಕರು ಸದ್ಯಕ್ಕೆ ಕದನಕ್ಕೆ ವಿರಾಮ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.