ಅಡ್ಕಾರು ಅಂಜನಾದ್ರಿಯಲ್ಲಿ ಶ್ರೀ ಭಜನಾಮೃತಂ ಭಕ್ತಿಗೀತೆಗಳ ಕೃತಿ ಬಿಡುಗಡೆ

anjanadriyalli bajane 1 copy

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಶ್ರೀ ಅಂಜನಾದ್ರಿ ಕ್ಷೇತ್ರದ ವಿಶೇಷತೆ ಹಾಗೂ ಮಹಿಮೆಯ “ಶ್ರೀ ಭಜನಾಮೃತಂ” ಎಂಬ ಶೀರ್ಷಿಕೆಯ ಕೃತಿಯು ಸೆ.೧೬ರಂದು ಬಿಡುಗಡೆಗೊಂಡಿತು.
ಅಂಜನಾದ್ರಿ ಕ್ಷೇತ್ರದ ಕುರಿತಾಗಿ ಉದಯ ಭಾಸ್ಕರ್ ಸುಳ್ಯ ಅವರ ರಚಿಸಿದ ಕೃತಿಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ಯ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಪುರೋಹಿತ ನಾಗರಾಜ್ ಭಟ್, ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ರೈ ಡಿಂಬ್ರಿಗುತ್ತು ಮತ್ತು ಪದಾಧಿಕಾರಿಗಳು, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ನಾಕ್ ಕಜೆಗದ್ದೆ ಮತ್ತು ಪದಾಧಿಕಾರಿಗಳು, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಶ್ರೀಮತಿ ಸುಲೋಚನ ನಾಯಕ್ ಮತ್ತು ಪದಾಧಿಕಾರಿಗಳು, ಭಜನಾ ಸಮಿತಿ ಅಧ್ಯಕ್ಷ ಜಯರಾಮ ಅಡ್ಕಾರು ಮತ್ತು ಪದಾಧಿಕಾರಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.