ಎನ್.ಎಂ.ಸಿ. ವಿದ್ಯುತ್ ಬಳಕೆ ಮತ್ತು ಸುರಕ್ಷತೆ ಮಾಹಿತಿ ಕಾರ್ಯಾಗಾರ

YRC Power Safety copy

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ ವಿದ್ಯುತ್ ಬಳಕೆ ಮತ್ತು ಸುರಕ್ಷತೆ ಎಂಬ ವಿಷಯದ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಪಾಲಿಟೆಕ್ನಿಕ್‌ನ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಬಾಲಕೃಷ್ಣ ಬೊಳ್ಳೂರು ಭಾಗವಹಿಸಿದ್ದರು. ಕಾಲೇಜಿನ ಗ್ರಂಥಾಲಯ ಸಿಬ್ಬಂದಿ ಉಮಾವತಿ ಎ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕದ ವಿದ್ಯಾರ್ಥಿ ಸಂಚಾಲಕ ಶಶಾಂಕ್ ಪಡ್ಕೆ, ಘಟಕದ ನಾಯಕರಾದ ಹೇಮಕಿರಣ ಕೆ ಎಂ ಹಾಗೂ ದೇವಿಕಾ ಎನ್ ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಜನ್ಯ ಮತ್ತು ದೇವಿಕಾ ವೈ ಪ್ರಾರ್ಥಿಸಿ, ದೇವಿಕಾ ವೈ ಸ್ವಾಗತಿಸಿ, ಪೂಜಾ ಪಿ ಕೆ ವಂದಿಸಿದರು. ನಳಿನಿ ಎಂ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.