ಹೈದರಬಾದ್‌ನಲ್ಲಿ ಝಡ್.ಎಸ್. ಹನಿ ಶಾಪ್ ಶುಭಾರಂಭ

honey b shop copy

ಸುದ್ದಿ ಮಾರ್ಕೆಟಿಂಗ್ ಸಹ ಭಾಗಿತ್ವದ ಝಡ್.ಎಸ್. ಹನಿ ಶೋಪ್ ಹೈದರಾಬಾದ್ ನಗರದಲ್ಲಿ ಹಸೈನಾರ್ ಜಯನಗರ ರವರ ನೇತೃತ್ವದಲ್ಲಿ ಸೆ.೧೫ ರಂದು ಶುಭಾರಂಭಗೊಂಡಿತು. ಹೈದರಾಬಾದ್ ಯಾಕೂಬ್ಪುರ ಕ್ಷೇತ್ರದ ಸಚಿವರಾದ ಮಮ್ತಾಝ್ ಖಾನ್ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಬೀರ್ ಪುರ ವಾರ್ಡ್‌ನ ಕಾರ್ಪೊರೇಟ್ ಚಂದ್ರಶೇಖರ ರೆಡ್ಡಿ, ಕಟ್ಟಡದ ಮಾಲಕ ಮಾಜಿದ್, ಪಾಲುದಾರರಾದ ಮಹಮ್ಮದ್ ಸುಲೈಮಾನ್, ಉದ್ಯಮಿ ಹುಸೈನ್ ಕೂಡಿಗೆ, ಜೀಶಾನ್, ಮುಬಶ್ಶಿರ್, ಸಾರ್ವಜನಿಕರು ಉಪಸ್ಥಿತರಿದ್ದರು. ಸೇರಿದ ಸಾರ್ವಜನಿಕರಿಗೆ ಹಸೈನಾರ್ ಜಯನಗರ ದ.ಕ. ಜಿಲ್ಲೆಯ ಜೇನು ಹಾಗೂ ಕಾಡುತ್ಪತಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಮಾಜಿದ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.