ಮಡಪ್ಪಾಡಿ ಸಮಿತಿ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಕ್ರಮ

madappady vijaya bank programe 1 copy

ವಿಜಯಬ್ಯಾಂಕ್ ಪ್ರವರ್ತಿತ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಮಡಪ್ಪಾಡಿ ಗ್ರಾಮದಲ್ಲಿ ನೂತನವಾಗಿ ರಚಿಸಿದ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಇಲಾಖಾ ಮಾಹಿತಿ ಕಾರ್ಯಕ್ರಮ ಸೆ.೧೫ರಂದು ಮಡಪ್ಪಾಡಿ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ವಸಂತ ಬಳ್ಳಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷಿಕ ಹೊನ್ನಪ್ಪ ಗೌಡ ಕುತ್ಯಾಳ ಆಗಮಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೊಡ್ಡತೋಟ ವಿಜಯ ಬ್ಯಾಂಕ್‌ನ ಶಾಖಾ ಪ್ರಬಂಧಕ ಬಿ ಸತೀಶ್ ಕುಮಾರ್ ನೆರವೇರಿಸಿದರು.ಪಂಚಾಯತ್ ಪಿಡಿಒ ಎಂ ಶ್ಯಾಂಪ್ರಸಾದ್ ಪ್ರಸ್ತಾವಣೆಗೈದರು. ಟ್ರಸ್ಟಿನ ಬಗ್ಗೆ ಪ್ರಸ್ತಾವನೆಯನ್ನು ಸುಳ್ಯ ವಿಜಯ ಬ್ಯಾಂಕ್‌ನ ಕೃಷಿ ಅಧಿಕಾರಿ ರಾಜೇಶ್ ರಾವರ್ ನೀಡಿದರು. ವೇದಿಕೆಯಲ್ಲಿ ಸಮಿತಿ ಕಾರ್ಯದರ್ಶಿ ಕುಮಾರಿ ರಚನಾ ಕೇವಳ ಉಪಸ್ಥಿತರಿದ್ದರು. ನಾಲ್ಕೂರು ಗ್ರಾಮ ಸಮಿತಿ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಕಚೇರಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ರಚನಾ ಸ್ವಾಗತಿಸಿ, ವಾಣಿಶ್ರೀ ವಂದಿಸಿದರು. ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.