ಐವರ್ನಾಡಿನಲ್ಲಿ ಬಿ.ಎಂ.ಟ್ರೇಡರ‍್ಸ್ ಶುಭಾರಂಭ

B

ಐವರ್ನಾಡಿನ ಮುಖ್ಯ ರಸ್ತೆ ಸಮೀಪ ಕೃಪ ಮಡ್ತಿಲ ಕಾಂಪ್ಲೆಕ್ಸ್‌ನಲ್ಲಿ ಬೆಳ್ಳಾರೆ ಮುನೀರ್ ಏಜೆನ್ಸೀಸ್‌ರವರ ಮಾಲಕತ್ಸದ ಸಹಸಂಸ್ಥೆ ಬಿ.ಎಂ.ಟ್ರೇಡರ‍್ಸ್ ಸೆ.೧೪ ರಂದು ಶುಭಾರಂಭಗೊಂಡಿತು.
ಬೆಳ್ಳಾರೆ ಜುಮ್ಮಾ ಮಸೀದಿಯ ಮುದರ್ರಿಸ್ ತಾಜುದ್ದೀನ್ ರಹಮಾನಿಯವರು ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಫೈಝಿ, ಬೆಳ್ಳಾರೆ ಮುನೀರ್ ಏಜೇನ್ಸೀಸ್ ಮತ್ತು ಕಂ ಮಾಲಕ ಹಾಜಿ.ಕೆ.ಮಮ್ಮಾಲಿ, ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ,ಬಿಲ್ಡಿಂಗ್ ಮಾಲಕ ಸತೀಶ್ ಮಡ್ತಿಲ, ಶಿವರಾಮ ನೆಕ್ರೆಪ್ಪಾಡಿ, ಆರ್.ಕೆ.ಬೆಳ್ಳಾರೆ, ನವೀನ ಚಾತುಬಾಯಿ, ವೆಂಕಪ್ಪ ಗೌಡ ಜೆ.ಟಿ,ರಾಜೇಶ್ ಭಟ್ ಬಾಂಜಿಕೋಡಿ,ಖಲಂದರ್ ಶಾಫಿ ಎಂ.ಬಿ.ಎ., ಬಿ.ಎ.ಬಶೀರ್,ಹಸೈನಾರ್ ಹಾಜಿ,ಸಿ.ಎಂ.ಫಾರೂಕ್ ಬೆಳ್ಳಾರೆ ಹಾಗೂ ಇತರ ಗಣ್ಯರು ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಪಾಲುದಾರರಾದ ಅಬ್ದುಲ್ ಬಶೀರ್ ಮತ್ತು ಮುನಿರ್ ಬೆಳ್ಳಾರೆ ಅತಿಥಿಗಳನ್ನು ಸ್ವಾಗತಿಸಿದರು.
ಇಲ್ಲಿ ಅಡಿಕೆ, ಬಾಳೆಗೊನೆ,ತೆಂಗಿನಕಾಯಿ,ಕೊಕ್ಕೋ, ಹಾಗೂ ಕಾಡುತ್ಪತ್ತಿಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.