ಮರಣ ಶಾಸನವಾಗಿದೆ ಕಡಪಳ ಸೇತುವೆ ರಸ್ತೆ ತಡೆ ಮಾಡಿ ಪ್ರತಿಭಟನೆಯ ಎಚ್ಚರಿಕೆ

Advt_NewsUnder_1
Advt_NewsUnder_1
Advt_NewsUnder_1

Press meet..sampaje pa. copy

ಸಂಪಾಜೆಯ ಕಡಪಳದಲ್ಲಿ ಅಗಳ ಕಿರಿದಾದ ಸೇತುವೆಯಿಂದ ಪದೆ ಪದೆ ಅಪಘಾತಗಳಾಗಿ ಅನಾಹುತಗಳು ಆಗುತ್ತಿದ್ದು, ೧೫ ದಿನಗಳ ಒಳಗೆ ಹೊಸ ಸೇತುವೆ ನಿರ್ಮಾಣ ಆರಂಭಿಸದಿದ್ದಲ್ಲಿ ರಸ್ತೆ ತಡೆಮ ಮಾಡಿ ಪ್ರತಿಭಟಿಸುವುದಾಗಿ ಸಂಪಾಜೆಯ ಮುಖಂಡರು ಎಚ್ಚರಿಸಿದ್ದಾರೆ. ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ, ಮಾತನ್ನಾಡಿದ ಸಂಪಾಜೆ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಯವರು ರಾಜ್ಯ ಹೆದ್ದಾರಿಯ ಕಡಪಳ ಎಂಬಲ್ಲಿ ಈ ಸೇತುವೆ ಇದ್ದು, ಇದು ರಾಜ್ಯ ಹೆದ್ದಾರಿಯ ವಿತರಣೆಯ ಸಂದರ್ಭ ಅಭಿವೃದ್ದಿಗೊಳ್ಳಬೇಕಿದೆ. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿದು ಎರಡು ವರ್ಷವಾದರೂ ಈ ಸೇತುವೆ ಮಾತ್ರ ಅಭಿವೃದ್ದಿಗೊಂಡಿಲ್ಲ. ನಾವು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ. ಈ ಸೇತುವೆ ಸಮಸ್ಯೆಯಿಂದಿಲ್ಲ ಹಲವು ಬಾರಿ ಅಪಘಾತ ನಡೆದಿದ್ದು, ಒಂದು ಜೀವ ಹಾನಿ ಕೂಡ ಸಂಭವಿಸಿದ್ದೆ, ಹಿಂದೊಮ್ಮೆ ನಾವು ಹೋರಾಟ ಮಾಡಿದಾಗ ಒಮ್ಮೆ ಕಾಮಗಾರಿಯ ತಯಾರಿ ನಡೆದಿತ್ತು. ಆದರೆ ಮತ್ತೆ ನೆನೆಗುದಿಗೆ ಬಿದ್ದಿದೆ ಎಂದರು.
೧೫ ದಿನಗಳೊಳಗೆ ಈ ಸೇತುವೆ ಕಾಮಗಾರಿಯನ್ನು ಆರಂಭಿಸದಿದ್ದರೆ ಇದರ ಹೋರಾಟ ನಡೆಸುವುದಾಗಿ ಹೇಳಿದ ಅವರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಗ್ರಾ,ಪಂ. ಸದಸ್ಯ ಜಿ.ಕೆ. ಹಮೀದ್ ಮಾತನಾಡಿ, ೨೦೧೬ ರಿಂದಲೇ ಈ ಕುರಿತು ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು, ಯಾವುದೇ ರೀತಿಯಿಂದ ಸ್ಪಂದಿಸಿಲ್ಲ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಯಶೋದಾ ಶ್ರೀಧರ್, ಉಪಾಧ್ಯಕ್ಷೆ ಆಶಾ ವಿನಯಕುಮಾರ್, ಸದಸ್ಯರಾದ ಲತೀಶಾ ಡಿಸೋಜ, ಮೋಹಿನಿ ಪೆಲತ್ತಡ್ಕ, ನಾಗೇಶ್, ಷಣ್ಮುಗಂ, ಸುಂದರಿ, ಲೂಕಸ್ ಪತ್ರಿಕಾಗೋಷ್ಠಿಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.