ಸೆ.21 ರಿಂದ 30ರವರೆಗೆ ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ 5ನೇ ವರ್ಷದ ನವರಾತ್ರಿ ಉತ್ಸವ

Suddi logo copy

ಕಲ್ಲುಗುಂಡಿಯ ನೆಲ್ಲಿಕುಮೇರಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.21ರಿಂದ 30ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಲಾರ್ಯಕ್ರಮಗಳೊಂದಿಗೆ ನಡೆಯಲಿದೆ.ಸೆ.೨೧ ರಂದು ಬೆಳಿಗ್ಗೆ ಗಂಟೆ ೬ ಕ್ಕೆ ಗಣಹೋಮ ವಿಶೇಷ ಆಲಂಕಾರ ,ನಿತ್ಯ ಪೂಜೆ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಂತರ ಅನ್ನಸಂತಪಣೆ ನಡೆಯಲಿದೆ.ಸಂಜೆ ಗಂಟೆ ೬ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆದು ನಂತರ ಧಾರ್ಮೀಕ ಉಪನ್ಯಾಸ ನಡೆಯಲಿದೆ.ನಂತರ ಮಹಾಪೂಜೆ ಮಂಗಳಾರತಿ ನಡೆಯಲಿದೆ.
ಸೆ.೨೨ ಮತ್ತು ೨೯ ರಂದು ಸಾಮೂಹಿಕ ದುರ್ಗಾ ಪೂಜೆ ನಡೆಯಲಿದೆ.ಸೆ.೨೮ ರಂದು ಶಾರದಾ ಪೂಜೆಯ ಪ್ರಯುಕ್ತ ಮಕ್ಕಳಿಗಾಗಿ ಪುಸ್ತಕ ಪೂಜೆ ,ಅಕ್ಷರಾಭ್ಯಾಸ ಸಡೆಯಲಿದೆ.ಸೆ.೨೯ರಂದು ಪೂ.೯:೩೦ ರಿಂದ ಆಯುಧಪೂಜೆ ನಡೆಯಲಿದೆ.ಸೆ.೩೦ರಂದು ಶ್ರೀ ಮುತ್ತು ಮಾರಿಯಮ್ಮ ದೇವಿಸಹಿತ ಪರಿವಾರ ದೇವರಿಗೆ ಸಾನ್ನಿಧ್ಯ ಕಲಶ ಆರಾಧನೆ ನಡೆಯಲಿದೆ.ಪ್ರತಿ ದಿನ ಸಂಜೆ ೬ ರಿಂದ ೭:೩೦ ರವೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.