ಸುಬ್ರಹ್ಮಣ್ಯ : ರೋಟರಿಯಿಂದ ಶಿಕ್ಷಕರಿಗೆ ಗೌರವಾರ್ಪಣೆ

subramanya rotary yinda shikshakarige sanmana copy

 ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ರೋಟರಿ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರನ್ನು ಸುಬ್ರಹ್ಮಣ್ಯದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಗೌರವಿಸಲಾಯಿತು.
ಸುಬ್ರಹ್ಮಣ್ಯ ರೋಟರಿ ಕ್ಲಬ್‌ನಲ್ಲಿ ರೋಟರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಶಿಕ್ಷಕರು ಸಮಾಜಸೇವೆ ಹಾಗೂ ಸೇವಾ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ನಿಕಟ ಪೂರ್ವಾಧ್ಯಕ್ಷ, ಉಪನ್ಯಾಸಕ ಬಾಲಕೃಷ್ಣ ಪೈ, ಪೂರ್ವಾಧ್ಯಕ್ಷರುಗಳಾದ ಶಿವರಾಮ ಏನೆಕಲ್, ಸೋಮಶೇಖರ ನಾಯಕ್, ನಿಯೋಜಿತ ಅಧ್ಯಕ್ಷ ವಿಶ್ವನಾಥನಡುತೋಟ, ನಿಕಟಪೂರ್ವ ಕಾರ್ಯದರ್ಶಿ ವಿಜಯಕುಮಾರ ಅಮೈ, ಪೂರ್ವಕಾರ್ಯದರ್ಶಿ ಗಿರೀಶ್, ಸದಸ್ಯ ಜಯಪ್ರಕಾಶ್ ಇವರು ಗೌರವ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ್ ಎಚ್.ಎಲ್., ಕಾರ್ಯದರ್ಶಿ ಗೋಪಾಲ ಎಣ್ಣೆಮಜಲು, ಪೂರ್ವಾಧ್ಯಕ್ಷರುಗಳಾದ ಕಾರ್ಯಪ್ಪ ಪಿ.ಎಸ್ ವಸಂತಕುಮಾರ ಕೆದಿಲ,ಸದಸ್ಯರಾದ ವಿ.ಟಿ ವೆಂಕಟೇಶ್, ಎನ್.ಮಂಜುನಾಥ ರಾವ್, ಮೋಹನ್‌ದಾಸ್ ಎಣ್ಣೆಮಜಲು, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.