ಚಿದಾನಂದ ಕೆ ಅವರಿಗೆ ರೋಟರಿ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್

chidanandarige national builder award copy

ಎಂ.ಜಿ.ಎಂ ಪ್ರೌಢಶಾಲೆ ಕೊಡಿಯಾಲ ಬೈಲ್ ಮುಖ್ಯೋಪಾಧ್ಯಾಯ ಚಿದಾನಂದ ಕೆ ಅವರಿಗೆ ರೋಟರಿ ಕ್ಲಬ್ ಸುಳ್ಯ ಕೊಡಮಾಡುವ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್ ಪ್ರಶಸ್ತಿ ಲಬಿಸಿದೆ. ಸೆ.೬ ರಂದು ಎಂ.ಜಿ.ಎಂ ಪ್ರೌಢಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನ ಅಧ್ಯಕ್ಷ ಜಿತೇಂದ್ರ ಎನ್. ಎ ವಹಿಸಿದ್ದರು. ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಗಿರಿಜಾ ಶಂಕರ್, ರೋ. ಚಂದ್ರಶೇಖರ ಪೇರಾಲು, ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಶಾಲಾ ಸಂಚಾಲಕ ದಾಮೋದರ ನಾರ್ಕೋಡು, ರೋಟರಿ ಕಾರ್ಯದರ್ಶಿ ಡಾ. ಪುರುಷೋತ್ತಮ ಕೆ.ಜಿ, ಅಶೋಕ್ ಸರಳಾಯ, ಗೋಪಿನಾಥ್, ಸತೀಶ್ ಕೆ.ಜಿ, ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು. ಚಂದ್ರಶೇಖರ ಪೇರಾಲು ಅಭಿನಂದನಾ ಮಾತನಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.