ಸುಳ್ಯ ಜ್ಞಾನದೀಪದಲ್ಲಿ ಓಣಂ ಆಚರಣೆ

onam2 copy

ಸುಳ್ಯದ ಶ್ರೀ ಹರಿ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ನರ್ಸರಿ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರು ಆಕರ್ಷಕವಾದ ಹೂವಿನ ರಂಗೋಲಿಯನ್ನು ರಚಿಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಓಣಂ ವಿಶೇಷತೆಯ ಬಗ್ಗೆ ತಿಳಿಸಿದರು. ಉಪನ್ಯಾಸಕರುಗಳಾದ ಗಣೇಶ್ ನಾಯಕ್, ತೀರ್ಥಾನಂದ ಕಲ್ಮಡ್ಕ, ಪಲ್ಲವಿ, ಸ್ವಾತಿ, ಕಂಪ್ಯೂಟರ್ ಶಿಕ್ಷಕಿಯರುಗಳಾದ ಸೌಮ್ಯ ಕೆ, ಅಪರ್ಣಾ ಸೇರಿದಂತೆ ಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಎನ್.ಟಿ.ಟಿ.ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.