ಕದಿಕಡ್ಕ: ವಿಷ ಸೇವಿಸಿ ಯುವಕ ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1

ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.26ರಂದು ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸಂಭವಿಸಿದೆ. ಕದಿಕಡ್ಕ ರಾಜು ಬೆಳ್ಚಪ್ಪಾಡ ಹಾಗೂ ಶ್ರೀಮತಿ ಶಾರದಾ ದಂಪತಿಗಳ ಕಿರಿಯ ಪುತ್ರ ಭಾಸ್ಕರ ಅವರು ಕನಕಮಜಲಿನ ಪೂಪಿ ಸಾಪ್ಟ್ ಡ್ರಿಂಕ್ಸ್ ನಲ್ಲಿ ಉದ್ಯೋಗಿಯಾಗಿದ್ದು ಅ.26ರಂದು ಕೆಲಸಕ್ಕೆ ಹೋಗದೆ ರಜೆ ಮಾಡಿ ಮನೆಯಲ್ಲಿದ್ದರು. ಸಂಜೆ ವೇಳೆ ಮನೆಯಲ್ಲಿ ತೆಂಗಿನ ಮರಕ್ಕೆ ಸಿಂಪಡಿಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರೆನ್ನಲಾಗಿದೆ. ಮನೆಯವರು ವಿಚಾರಿಸಿದಾಗ ತಾನು ಕೀಟನಾಶಕ ಸೇವಿಸಿರುವ ವಿಷಯ ತಿಳಿಸಿದರು. ತಕ್ಷಣ ಮನೆಯವರು ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ ಆ ವೇಳೆಗೆ ಭಾಸ್ಕರ ಅವರು ಕೊನೆಯುಸಿರೆಳೆದಿದ್ದರು. ಅವರಿಗೆ 30 ವರ್ಷ ವಯಸ್ಸಾಗಿದ್ದು ತಂದೆ ರಾಜು, ತಾಯಿ ಶಾರದಾ ಸಹೋದರರಾದ ಶಶಿಕಾಂತ, ಚಂದ್ರಶೇಖರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.