ಡಿ.25ರಂದು ಯಾದವ ಸಭಾ ಜಿಲ್ಲಾ ಸಮ್ಮೇಳನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

yಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಮತ್ತು ಸುಳ್ಯ, ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಯಾದವ ಜಿಲ್ಲಾ ಸಮ್ಮೇಳನವು ಡಿ.೨೫ರಂದು ಸುಳ್ಯದ ಶಿವ ಕೃಪ ಕಲಾ ಮಂದಿರಲ್ಲಿ ನಡೆಯಲಿದೆ.
ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸುಳ್ಯ ಶಾಸಕ ಎಸ್. ಅಂಗಾರ ಸಮ್ಮೇಳನವನ್ನು ಉದ್ಘಾಟಿಸಲಿದ್ದು ಕರ್ನಾಟಕ ಯಾದವ ಸಂಘದ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಪತಿ, ಯಾದವ ಕ್ಷೇಮನಿಧಿ ಗೌರವಾಧ್ಯಕ್ಷ ಡಿ.ಟಿ. ಶ್ರೀನಿವಾಸ, ಅಖಿಲಭಾರತ ಯಾದವ ಸಭಾ ಉಪಾಧ್ಯಕ್ಷ ಪೂರ್ಣಿಮ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಸಂಜೆ ನಡೆಯುವ ಸಮರೋಪ ಸಮಾರಂಭದಲ್ಲಿ ಪುತ್ತೂರು ಶಾಸಕಿ ಶಕುಂತಾಳ ಶೆಟ್ಟಿ ಸಮರೋಪ ಭಾಷಣ ಮಾಡುವರು ಎಂದು ಅವರು ತಿಳಿಸಿದರು. ಸಮ್ಮೇಳದ ಅಂಗವಾಗಿ ಡಿ.೧೧ರಂದು ಅಜ್ಜಾವರ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಕ್ರೀಡಾ ಕೂಟ ನಡೆಯಲಿದೆ.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಮ ಆಲೆಟ್ಟಿ, ತಾಲೂಕು ಸಮಿತಿ ಅಧ್ಯಕ್ಷ ಎ,ಕೆ. ಮಣಿಯಾಣಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಜಯ ಕೃಷ್ಣ, ಕೇಂದ್ರ ಸಮಿತಿ ಕಾರ್ಯದರ್ಶಿ ಕರುಣಾಕರ ಹಾಸ್ಪರೆ, ತಾಲೂಕು ಸಮಿತಿ ಜೊತೆ ಕಾರ್ಯದರ್ಶಿ ಕೃಷ್ಣ ಬೆಟ್ಟ ಪ್ರತಿಕೊಗೋಷಿಯಲ್ಲಿ ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.