ಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ಜಾಲ್ಸೂರಿನಲ್ಲಿ ಗ್ರಾಮ ದರ್ಶನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

jಸುದ್ದಿ ಮಾಹಿತಿ ಟ್ರಸ್ಟಿ ವತಿಯಿಂದ ಜಾಲ್ಸೂರು ಗ್ರಾಮದಲ್ಲಿ ಗ್ರಾಮ ದರ್ಶನ ಕಾರ್ಯಕ್ರಮ ನ.೨೪ರಂದು ಜಾಲ್ಸೂರಿನ ಪಂಚಾಯತ್ ಸಭಾವನದಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು. .

j3

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕರಾದ ಡಾ|ಯು.ಪಿ. ಶಿವಾನಂದ್ ಗ್ರಾಮ ದರ್ಶನದ ಬಗ್ಗೆ ಮಾಹಿತಿ ನೀಡಿದರು.ಗ್ರಾಮ ದರ್ಶನದ ಬಗ್ಗೆ ಮಾಹಿತಿ ನೀಡಿದ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ|ಯು.ಪಿ. ಶಿವಾನಂದರು ಮಾತನಾಡಿ ಜಾಲ್ಸೂರು ಗ್ರಾಮದ ವರದಿ, ವಿಶೇಷತೆಗಳು ಜಾಲ್ಸೂರು ಗ್ರಾಮಸ್ಥರಿಗೆ ಕ್ಷಣ ಮಾತ್ರದಲ್ಲಿ ಸಿಗುವಂತಾಗಲು ಗ್ರಾಮದ ಫೇಸ್ ಬುಕ್ ಮತ್ತು ವೆಬ್ ಸೈಟ್ ಮೂಲಕ ನೀಡುವುದು ಇದರ ಉದ್ದೇಶ. ಜಾಲ್ಸೂರಿನ ಎಲ್ಲಾ ವರದಿಗಳಿಗೆ ಗ್ರಾಮದವರೇ ಪ್ರತಿಕ್ರಿಯೆ, ಚರ್ಚೆ ನಡೆಸಬಹುದು. ಗ್ರಾಮ ಮಟ್ಟದಲ್ಲಿ ಮಾಧ್ಯಮ ಕ್ರಾಂತಿಗೆ ನಾವು ಮುಂದಾಗಿದ್ದೇವೆ. ಭವಿಷ್ಯದ ದೃಷ್ಠಿಯಿಂದ ಅಂತರ್‌ಜಾಲ ವ್ಯವಸ್ಥೆ ನಮಗೆ ಅವಶ್ಯಕವಾಗಿದೆ. ಗ್ರಾಮ ದರ್ಶನದ ಕೊನೆಯ ಹಂತದಲ್ಲಿ ಪಂಚಾಯತ್ ಪ್ರಾಯೋಜಕತ್ವದಲ್ಲಿ ನಾವು ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿ ಗ್ರಾಮಸ್ಥರಿಗೆ ಬೇಕಾದ ಮಾಹಿತಿಯನ್ನು ನೀಡಲು ಸಿದ್ದರಿದ್ದೇವೆ. ಗ್ರಾಮೋತ್ಸವ ನಡೆಸಿ ಗ್ರಾಮದ ಎಲ್ಲರನ್ನು ಒಂದೆಡೆ ಸೇರಿಸಲಿದ್ದೇವೆ ಎಂದರು.

j2

ಗ್ರಾ.ಪಂ. ಉಪಾಧ್ಯಕ್ಷ ದಿನೇಶ್ ಅಡ್ಕಾರ್ ಮಾತನಾಡಿ ಗ್ರಾಮದರ್ಶನಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ಎಂಬುದನ್ನು ನಿರ್ಣಯಿಸುತ್ತೇವೆ ಎಂದು ಹೇಳಿದರು. ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು ಮಾತನಾಡಿ ನಮ್ಮ ರಾಜಕೀಯ ಬೆಳವಣಿಗೆಗೆ ಸುದ್ದಿ ಪತ್ರಿಕೆ ಕಾರಣವಾಗಿದೆ ಎಂದರು. ಗ್ರಾಮದ ಮುಖಂಡರಾದ ಜಾಕೆ ಸದಾನಂದ ಗೌಡ, ಚೆನ್ನಕೇಶವ ಜಾಲ್ಸೂರು, ಯುರೇಶ್ ಜಾಲ್ಸೂರು, ಬಾಬು ಜಾಲ್ಸೂರು ಅನಿಸಿಕೆ ವ್ಯಕ್ತಪಡಿಸಿದರು. ಸುದ್ದಿ ಪತ್ರಿಕೆಯ ಹಿರಿಯ ಏಜೆಂಟ್ ಎಮ್.ಎಸ್. ಭಟ್ ವೇದಿಕೆಯಲಿದ್ದರು.

Gramadarshana jalsur 14
ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್, ಪ್ರಸರಣಾಧಿಕಾರಿ ಗಣೇಶ್ ಕುಕ್ಕುದಡಿ, ಶಿಕ್ಷಣ ಮಾಹಿತಿ ಮುಖ್ಯಸ್ಥ ವಿನಯ್ ಜಾಲ್ಸೂರು ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸುದ್ದಿ ಚಾನೆಲ್ ನಿರ್ದೇಶಕ ದುರ್ಗಾಕುಮಾರ್ ನಾಯರ್‌ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯಶ್ವಿತ್ ಕಾಳಮನೆ ಸ್ವಾಗತಿಸಿ , ಶಿವಪ್ರಸಾದ್ ಕೇರ್ಪಳ ವಂದಿಸಿದರು. ಸಭೆಯಲ್ಲಿ ಟಿ.ಶಂಕರ ಮೂರ್ತಿ ಅಡ್ಕಾರ್, ಎಸ್. ಸತೀಶ್ ಜಾಲ್ಸೂರು, ಕೆ. ಕರುಣಾಕರ ಗೌಡ ಕಾಡು ಸೊರಂಜ, ನಾರಾಯಣ ಗೌಡ ಗಬ್ಬಲಡ್ಕ, ಬಾಬು ಪಾಟಾಳಿ, ಹಮೀದ್ ಅಡ್ಕಾರ್, ಜಯರಾಮ ಕದಿಕ್ಕಡ್ಕ, ಸುರೇಶ್ ಜಾಲ್ಸೂರು, ಎಸ್. ಇಬ್ರಾಹಿಂ, ಅಬ್ದುಲ್ಲ ಕದಿಕ್ಕಡ್ಕ, ಕುಂಞಂಬು ಅಡ್ಕಾರ್, ಪದ್ಮನಾಭ ಭಟ್, ಎಲ್ಯಣ್ಣ ಗೌಡ ಕಾಳಮನೆ, ಜಿ.ಕೆ.ಮೋಹನ್ ಸೋಣಂಗೇರಿ, ಗಂಗಾಧರ ರೈ ಸೋಣಂಗೇರಿ, ದಿವಾಕರ ರೈ ಕೆ.ಎನ್., ಬೋಜಪ್ಪ ನಾಯ್ಕ ಅಡ್ಕಾರ್, ಕರುಣಾಕರ ರೈ, ಮಾಧವ ಗೌಡ ಕಾಳಮನೆ, ಅಚ್ಚುತ ಮಣಿಯಾಣಿ, ದೇವಿಪ್ರಸಾದ್ ಅಡ್ಕಾರ್, ಕಿಶೋರ್ ಕುಮಾರ್, ರಜತ್ ಡಿ. ಅಡ್ಕಾರ್, ಗೀತಾ ಗೋಪಿನಾಥ್ ಬೊಳುಬೈಲು, ನಿವೇದಿತ ವಸಂತ್ ಪದವು, ಸಾತ್ವಿಕ್ ಪಿ.ವಿ. ಕೋನಡ್ಕ, ವೀಣಾ ಹರಿಪ್ರಕಾಶ್ ಅಡ್ಕಾರ್, ಸುಲೋಚನ ನಾಯಕ್ ಅಡ್ಕಾರ್, ಯಸ್.ಜನಾರ್ಧನ ಆಚಾರ್ಯ, ಕೆ.ರಘನಾಥ, ಎಂ. ಭಾಸ್ಕರ ಗೌಡ, ತಿರುಮಲೇಶ್ವರಿ ಜಾಲ್ಸೂರು, ಮಮತ ಅಡ್ಕಾರ್, ಮಹಮ್ಮದ್ ಸುಲೈಮಾನ್, ಜಯಂತ ಕಾಳಂಮನೆ, ಚಿದಾನಂದ ಜಾಲ್ಸೂರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.