ಉಬರಡ್ಕದಲ್ಲಿ ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆ – ಸ್ಮಶಾನದ ಸಮಸ್ಯೆ ಕುರಿತು ಚರ್ಚೆ

Sc st sabhe ubaradka 2ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆ ಸುಳ್ಯ ಎಸ್‌ಐ ಚಂದ್ರಶೇಖರ್ ನೇತೃತ್ವದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

Sc st sabhe ubaradka 1ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಉಬರಡ್ಕ, ಉಪಾಧ್ಯಕ್ಷೆ ಶೈಲಜಾ, ಸದಸ್ಯರಾದ ಹರಿಪ್ರಸಾದ್ ಪಾನತ್ತಿಲ, ಕೇಶವ ಕಕ್ಕೆಬೆಟ್ಟು, ಮಮತಕುದ್ಪಾಜೆ, ಗೀತಾ ಕುತ್ತಮೊಟ್ಟೆ, ಪಿಡಿ ಗುರುಪ್ರಸಾದ್ ವೇದಿಕೆಯಲ್ಲಿದ್ದರು. ಸುಳ್ಯದಲ್ಲಿ ನಡೆದ ಎಸ್‌ಸಿಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಜನಾರ್ದನ ನಾಯ್ಕ ಎಂಬವರು ನೀಡಿದ ದೂರು ಸತ್ಯವಲ್ಲ. ಅವರ ಜಮೀನು ಸಮಸ್ಯೆ ಕೂಡಾ ಕುಟುಂಬದ ಒಳಗಿನ ವ್ಯವಹಾರ ಎಂದು ಸೀತಾನಂದ ಬೇರ್ಪಡ್ಕ ಹೇಳಿದರು ಇದನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿ ಎಂದು ಎಸ್‌ಐ ಹೇಳಿದರು.
ಮನೆ ಮಂಜೂರಾಗಿದ್ದರೂ ನಿವೇಶನವನ್ನು ಸ್ಥಳೀಯರೊಬ್ಬರು ವಶಕ್ಕೆ ಪಡೆದಿರುವುದರಿಂದ ಸಮಸ್ಯೆಯಾಗಿದೆ ಎಂದು ಚೋಮ ಎಂಬವರು ದೂರಿದರು. ಮಾಧವ ಗೌಡ ಹಾಗೂ ಚೋಮರ ಮಧ್ಯೆ ಜಮೀನು ವಿವಾದವಿದ್ದು, ಅದನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿ ಎಂದು ಹರೀಶ್ ಉಬರಡ್ಕ ಸಲಹೆ ಮಾಡಿದರು.
ಪಾನತ್ತಿಲ ಕಾಲೋನಿಯವರಿಗೆ ಸ್ಮಶಾನದ ಸಮಸ್ಯೆ ಇದೆ. ಸ್ಮಶಾನ ಇದ್ದರೂ ಮಧ್ಯದಲ್ಲಿ ಕಂದಡ್ಕ ಹೊಳೆ ಹರಿಯುವುದರಿಂದ ಮಳೆಗಾಲದಲ್ಲಿ ಸುತ್ತು ಬಳಸಿ ಬರಬೇಕು ಎಂದು ಸ್ಥಳೀಯ ನಿವಾಸಿಗಳು ದೂರಿದರು. ಮಾಣಿಬೆಟ್ಟು ಕಾಲೋನಿಗೆ ಹೋಗುವ ರಸ್ತೆ ಇಸಾಕ್ ಸಾಹೇಬ್ ಎಂಬವರ ಜಮೀನಿನ ಮೂಲಕ ಹೋಗುತ್ತಿದೆ. ಪಂಚಾಯತ್‌ನಿಂದ ರಸ್ತೆ ದುರಸ್ತಿಗೆ ೩೦ ಸಾವಿರ ಅನುದಾನವೂ ಇದೆ. ಆದರೆ ಇಲ್ಲಿ ಎರಡು ರಬ್ಬರ್ ಮರ ರಸ್ತೆಗೆ ಅಡ್ಡವಾಗಿದೆ. ಎರಡೆರಡು ಬಾರಿ ಮನವಿ ಮಾಡಿದ್ದೇವೆ. ಪಂಚಾಯತ್ ವತಿಯಿಂದ ಮನವಿ ಮಾಡಬೇಕು ಎಂದು ಸೀತಾನಂದ ಬೇರ್ಪಡ್ಕ ಆಗ್ರಹಿಸಿದರು. ಗ್ರಾಮದ ಶೇಖರ ಎಂಬವರ ಅಟೋರಿಕ್ಷಾ ಕಳವಾಗಿದೆ. ಹುಡುಕುವ ಯತ್ನ ಮಾಡಬೇಕೆಂದು ಹರೀಶ್ ಉಬರಡ್ಕ ಮನವಿ ಮಾಡಿದರು.
ಕೊಳೆವೆ ಬಾವಿ ಕೊರೆಸುವ ನಿರ್ಬಂಧದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕಳೆದ ವರ್ಷ ಬೇಸಿಗೆಯಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಹತ್ತಿರದ ಮನೆಗಳಿಗೆ ನೀರು ನೀಡಲಾಗಿದೆ. ಆ ಷರತ್ತಿನಲ್ಲಿ ಅನುಮತಿ ನೀಡಬಹುದು ಎಂದು ಸೀತಾನಂದ ಬೇರ್ಪಡ್ಕ ಸಲಹೆ ನೀಡಿದರು. ಕೊಳವೆ ಬಾವಿ ನಿಬಂಧಿಸಿರುವುದು ಸರ್ಕಾರದ ತೀರ್ಮಾನ. ಇದನ್ನು ಬದಲಿಸಲು ಕಷ್ಟ. ಹಾಗಿದ್ದೂ ಶಾಸಕರ ಮೂಲಕ ಯತ್ನಿಸುವುದಾಗಿ ಹರೀಶ್ ಉಬರಡ್ಕ ಉತ್ತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.