ಬಾಲೆಂಬಿ ಕುಟುಂಬದ ಗದ್ದೆಕೋರಿ ಉತ್ಸವ

b1ಚೆಂಬು ಗ್ರಾಮದ ಬಾಲೆಂಬಿ ಕುಟುಂಬದ ಗದ್ದೆಕೋರಿ ಉತ್ಸವ ನ.೨೩ರಂದು ನಡೆಯಿತು. ಬಾಲೆಂಬಿ ಮಲೆ ಭೂತ ದೈವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಬಳಿಕ ಗದ್ದೆಯಲ್ಲಿ ಎತ್ತುಹೂಳುವ ಕಾರ್ಯಕ್ರಮ ನಡೆಯಿತು. ಗದ್ದೆಯಲ್ಲಿ ಯುವಕರಿಗೆ ಓಟದ ಸ್ಪರ್ಧೆ, ಗದ್ದೆಗೆ ಬಾಳೆ ಹಾಕುವುದು ನಡೆದು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಿನುಮಣಿ ದೈವಸ್ಥಾನದ ಜಾತ್ರೋತ್ಸವದ ಗೊನೆಕಡಿಯುವ ಮುಹೂರ್ತವನ್ನು ಸಾಂಪ್ರದಾಯಕವಾಗಿ ಡಿ.1 ರಂದು ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಾಲೆಂಬಿ ಕುಟುಂಬಸ್ಥದ ಹಿರಿಯರಾದ ಸೋಮಣ್ಣ ಬಾಲೆಂಬಿ, ಜಿ.ವಿ. ಗಣಪಯ್ಯ ಬಾಲೆಂಬಿ, ಚಂಗಪ್ಪ, ಹರಿಪ್ರಸಾದ್ ಪನೆಡ್ಕ, ಚೆನ್ನಪ್ಪ ಬಂಗಾರಕೋಡಿ, ಕಾಚೇಲು ಪೊಣ್ಣಪ್ಪ, ಅಡಿಗಾರ ಜಯರಾಮ, ಮೇಲ್ಚೆಂಬು ಕುಟುಂಬಸ್ಥರು ಮತ್ತು ಗ್ರಾಮದ ಸದಸ್ಯರು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.