ಗಾಂಧಿನಗರ-ನಾಗಪಟ್ಟಣ ರಸ್ತೆ ದುರಸ್ತಿಗೆ ಆಗ್ರಹ

Advt_NewsUnder_1
Advt_NewsUnder_1
Advt_NewsUnder_1

Nagapattana durashthige manavi copyಸುಳ್ಯದಿಂದ ಬಂದಡ್ಕಕ್ಕೆ ಹೋಗುವ ಅಂತರ್‌ರಾಜ್ಯ ಹೆದ್ದಾರಿ ಭಾಗವಾಗಿರುವ ಗಾಂಧಿನಗರ-ನಾಗಪಟ್ಟಣ ರಸ್ತೆಯನ್ನು ತಕ್ಷಣ ದುರಸ್ತಿ ಮಾಡುವಂತೆ ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಸುಳ್ಯ ನಗರ ಪಂಚಾಯತ್‌ಗೆ ಮನವಿ ಸಲ್ಲಿಸಲಾಯಿತು.

ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾದರೂ ಸುಳ್ಯ ನಗರ ವ್ಯಾಪ್ತಿಯಲ್ಲಿ ಅದರ ನಿರ್ವಹಣೆ ಮಾಡುವುದಾಗಿ ಕೆಲವು ವರ್ಷಗಳ ಹಿಂದೆ ನಗರ ಪಂಚಾಯತ್ ಗಾಂಧಿನಗರ-ನಾಗಪಟ್ಟಣ ರಸ್ತೆಯನ್ನು ತನ್ನ ವಶಕ್ಕೆ ಪಡೆದಿದ್ದು, ಗುರುಂಪುವರಗೆ ಕಾಂಕ್ರೀಟಕರಣ ಮಾಡಿತು. ಆ ಬಳಿಕ ನಾಗಪಟ್ಟಣ ಸೇತುವೆವರೆಗೆ ರಸ್ತೆ ತೀರಾ ಹದೆಗೆಟ್ಟಿದೆ. ಕಳೆದ ವರ್ಷ ರಿಕ್ಷಾ ಚಾಲಕರು ಹೊಂಡ ಗುಂಡಿಗಳಿಗೆ ಮಣ್ಣು ತುಂಬಿ ದುರಸ್ತಿ ಮಾಡಿದ್ದರು. ಮಳೆಗಾಲದ ಬಳಿಕ ಅದರಲ್ಲಿ ಸಂಚರಿಸುವುದು ತೀರಾ ತ್ರಾಸದಾಯಕವಾಗಿದೆ. ಸುಮಾರು ಉಳಿಕೆಯಾದ 1 ಕಿ.ಮೀ. ರಸ್ತೆಯನ್ನು ದುರಸ್ತಿ ಮಾಡುವಂತೆ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಂಚಡ್ಕ ನೇತೃತ್ವದ ನಿಯೋಗ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರನ್ನು ಭೇಟಿ ಮನವಿ ಸಲ್ಲಿಸಿತು.
ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಮೊದಲಾದವರಿ ನಿಯೋಗದಲ್ಲಿದ್ದರು. ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಮನವಿ ಸ್ವೀಕರಿಸಿ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ನದಸ್ಯ ಪ್ರಕಾಶ್ ಹೆಗ್ಡೆ. ಮುಖ್ಯಾಧಿಕಾರಿ ಚಂದ್ರಕುಮಾರ್, ಇಂಜಿನಿಯರ್ ಶಿವಕುಮಾರ್ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.