ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ವಿದ್ಯಾನಗರ ನಾಮಕರಣ

vidya_nagara copyನ. 20 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಲಡ್ಕ ಜಕ್ಷನ್‌ನ್ನು ಕೇಂದ್ರವನ್ನಾಗಿರಿಸಿ ಇಲ್ಲಿ ನೂರಲ್ ಇಸ್ಲಾಂ ಮದರಸ ಶಾಲೆ, ಮುತ್ಲಾಜೆ ಶಾಲೆ, ಬ್ಲೆಸ್ಡ್ ಕುರಿಯಕೋಸ್ ಶಾಲೆ ಮತ್ತು ಗುತ್ತಿಗಾರು ಶಾಲೆಯನ್ನು ಹೊಂದಿದ ಈ ಪರಿಸರಕ್ಕೆ ಗ್ರಾಮಸ್ತರ ಬೇಡಿಕೆ ಮೇರೆಗೆ ವಿದ್ಯಾನಗರ ವೆಂದು ಗ್ರಾಮ ಸಭೆಯಲ್ಲಿ ಮತ್ತು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ವಿದ್ಯಾನಗರ ವೆಂದು ನಾಮಕರಣ ಮಾಡಿ, ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆಯವರು ತೆಂಗಿನಕಾಯಿ ಒಡೆಯುವುದರೊಂದಿಗೆ, ಪಂಚಾಯತ್ ಅಧ್ಯಕ್ಷರಾದ ಅಚ್ಚುತ ಗುತ್ತಿಗಾರು ನಾಮ ಫಲಕ ಅನಾವರಣ ಗೊಳಿಸಿದರು ಈ ಸಂದರ್ಭದಲ್ಲಿ ಡಾ| ಕಾಮತ್, ಸೈಜು ಕುರಿಯಕೋಸ್ ಶಾಲೆಯ ಪಿ.ಟಿ.ಎ. ಸದಸ್ಯ, ಹಸೆನಾರ್ ವಳಲಂಬೆ, ಕೇಶವ ಹೋಸೊಳಿಕೆ ಕುರಿಕೋಸ್ ಶಾಲೆಯ ಪಿ.ಟಿ.ಎ. ಅಧ್ಯಕ್ಷರು, ಗಿರೀಶ್ ಮುತ್ಲಾಜೆ, ಶಿವರಾಮ ಕರುವಜೆ ಗುತ್ತಿಗಾರು ಸ.ಹಿ.ಪ್ರಾ. ಶಾಲೆಯ ಅಧ್ಯಕ್ಷರು, ಸುಂದರ ಪುಲ್ಲಡ್ಕ ಮತ್ತು ಗ್ರಾಮಸ್ಥರು ಹಾಜರಿದ್ದರು.
ವೆಂಕಟ್ ವಳಲಂಬೆ ಮಾತನಾಡಿ, ಈ ಪರಿಸರದಲ್ಲಿ ಶಾಸಕರು ಮತ್ತು ಸಂಸದರ ನಿಧಿಯಿಂದ ಪಂಚಾಯತ್ ವತಿಯಿಂದ ಕಾಮಗಾರಿ ನಡೆಯಲ್ಲಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.